ಗಂಡನ ಅನೈತಿಕ ಸಂಬಂಧ (illicit relationship) ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಪತ್ನಿ (Wife) ದುರಂತ ಸಾವು ಕಂಡಿದ್ದಾಳೆ. ಹೌದು..ಗಂಡನ ಅನೈತಿಕ ಸಂಬಂಧ ಹಾಗೂ ಕಿರುಕುಣದಿಂದ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಅಘಾತಕಾರಿ ಘಟನೆಯೊಂದು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ.

ಗಂಡನ ಕಿರುಕುಳಕ್ಕೆ ಬೇಸತ್ತು 28 ವರ್ಷದ ಪತ್ನಿ ಪೂಜಾಶ್ರೀ ನೇಣಿಗೆ ಶರಣಾಗಿದ್ದಾಳೆ. ಇದರಿಂದ ಪುಟ್ಟ ಹೆಣ್ಣು ಮಗು ಅನಾಥವಾಗಿದೆ.

ಪೂಜಾಶ್ರೀ ಎಂಬ 28 ವರ್ಷದ ಮಹಿಳೆ ಮೂರು ವರ್ಷದ ಹಿಂದೆ ಪೋಷಕರು ನಿಶ್ಚಯಿಸಿದ್ದ ನಂದೀಶ್ ಜೊತೆ ವಿವಾಹವಾಗಿದ್ದರು. ಪೂಜಾಶ್ರೀ- ನಂದೀಶ್ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಕೂಡ ಇದೆ. ಪತಿ ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೇ, ಪೂಜಾಶ್ರೀ ಕೂಡ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೇ, ಕಳೆದ ಒಂದು ವರ್ಷದಿಂದ ಪತಿ ನಂದೀಶ್ ಗೆ ಅನೈತಿಕ ಸಂಬಂಧ ಇರುವುದು ಪೂಜಾಶ್ರೀಗೆ ಗೊತ್ತಾಗಿದೆ. ಈ ಬಗ್ಗೆ ಪೂಜಾ ಪತಿ ನಂದೀಶ್ ರನ್ನು ಪ್ರಶ್ನಿಸಿದ್ದಾಳೆ. ಬಳಿಕ ನಂದೀಶ್, ಪೂಜಾಳಿಗೆ ಕಿರುಕುಳ ಕೊಡಲಾರಂಭಿಸಿದ್ದಾನೆ.

ಈ ವೇಳೆ ನಂದೀಶ್ ತಾಯಿ, ನಿಮ್ಮ ಮನೆಯಿಂದ ವರದಕ್ಷಿಣೆ ತೆಗೆದುಕೊಂಜು ಬಾ ಎಂದು ಪೂಜಾಶ್ರೀಗೆ ಹೇಳಿದ್ದಾರೆ. ಬಳಿಕ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಬಳಿಕ ಪೂಜಾಶ್ರೀ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಿದ್ದರು.
ಈ ಬಗ್ಗೆ ಮನೆಯಲ್ಲಿ ಎರಡು ಮೂರು ಭಾರಿ ರಾಜೀ ಪಂಚಾಯಿತಿ ನಡೆದಿದ್ದು, ಮತ್ತೆ ವರದಕ್ಷಿಣೆ ಕಿರುಕುಳ ನೀಡಲ್ಲ. ಅನೈತಿಕ ಸಂಬಂಧ ಬೆಳೆಸಲ್ಲ ಎಂದು ಭರವಸೆ ನೀಡಿ ಪತ್ನಿ ಪೂಜಾಶ್ರೀಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ.

ಆದ್ರೆ, ಮೂರು ದಿನಗಳ ಹಿಂದೆ ನಂದೀಶ್ ಮತ್ತೆ ಜಗಳ ತೆಗೆದು ಪತ್ನಿ ಪೂಜಾಶ್ರೀ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಪೂಜಾಶ್ರೀ ಮತ್ತೆ ತಾಯಿ ಮನೆಗೆ ಹೋಗಿದ್ದಳು. ಮರು ದಿನ ಬೆಳಿಗ್ಗೆ ಪೂಜಾಶ್ರೀ ತವರು ಮನೆಗೆ ಹೋಗಿ ಹೊಸ ಕಥೆ ಕಟ್ಟಿ ಕರೆದುಕೊಂಡು ಹೋಗಿದ್ದ. ಆದ್ರೆ, ನಿನ್ನೆ ಬೆಳಿಗ್ಗೆ ಪೂಜಾಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮೃತ ಪೂಜಾಶ್ರೀ ಪೋಷಕರ ದೂರಿನ ಆಧಾರದ ಮೇಲೆ ಈ ಘಟನೆ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದ್ದು, ಪತಿ ನಂದೀಶ್ ನನ್ನು ಬಂಧಿಸಲಾಗಿದೆ. ಇನ್ನು ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ತಾಯಿ ಕೊಲೆಯಾಗಿದ್ದರೆ, ತಂದೆ ಜೈಲು ಪಾಲಾಗುತ್ತಿದ್ದಾನೆ. ಮಗು ಮಾತ್ರ ಅನಾಥವಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!