ಮಂಗಳೂರು:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಬಜಪೆ ಪೊಲೀಸರು ತ್ವರಿತ ಕ್ರಮ ಕೈಗೊಂಡು 5 ಮಂದಿಯನ್ನು ಬಂಧಿಸಿದ್ದಾರೆ.

30-08-2025 ರಂದು ಬೆಂಗಳೂರಿನಿಂದ ಮಂಗಳೂರು ತಲುಪಿದ AIR INDIA EXPRESS ವಿಮಾನದಲ್ಲಿ ಬಂದ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗೇಜ್ ನಿಂದ 56 ಗ್ರಾಂ ಚಿನ್ನಾಭರಣ (ಮೌಲ್ಯ ರೂ. 4.50 ಲಕ್ಷ) ಕಳವು ಆಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ತನಿಖೆಯಲ್ಲಿ AIR INDIA SATS ಕಂಪೆನಿಯ ಲೋಡರ್-ಅನಲೋಡರ್ ನೌಕರರಾದ ನಿತಿನ್ (ಕಂದಾವರ), ಸದಾನಂದ ಮತ್ತು ರಾಜೇಶ್ (ಮೂಡುಪೆರಾರು), ಪ್ರವೀಣ್ ಫೆರ್ನಾಂಡಿಸ್ (ಬಜಪೆ) ಅವರನ್ನು ಬಂಧಿಸಲಾಯಿತು. ವಿಚಾರಣೆಯಲ್ಲಿ ಇವರು ಚಿನ್ನಾಭರಣವನ್ನು ಮೂಡುಪೆರಾರದ ರವಿರಾಜ್ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳಿಂದ 50 ಗ್ರಾಂ ಚಿನ್ನ ಹಾಗೂ ಒಟ್ಟು ಸುಮಾರು ರೂ. 5 ಲಕ್ಷ ಮೌಲ್ಯದ ಮಾಲ ವಶಪಡಿಸಿಕೊಳ್ಳಲಾಗಿದೆ.

ರವಿರಾಜ್ ವಿರುದ್ಧವೂ ಕಳವು ಮಾಲ ಖರೀದಿ ಪ್ರಕರಣ ದಾಖಲಾಗಿ ಬಂಧಿಸಲಾಗಿದೆ.

ತನಿಖೆಯಲ್ಲಿ ಇದೇ ತಂಡ 2025ರ ಜನವರಿಯಲ್ಲಿ ಮತ್ತೊಬ್ಬ ಪ್ರಯಾಣಿಕ ಮನೋಹರ್ ಶೆಟ್ಟಿ ಅವರ ಬ್ಯಾಗಿನಿಂದ ರೂ. 2 ಲಕ್ಷ ನಗದು ಕಳವು ಮಾಡಿದ್ದದ್ದು ಬಹಿರಂಗವಾಗಿದೆ. ಈ ಬಗ್ಗೆ ಈಗಾಗಲೇ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಪ್ರಯಾಣಿಕರು ಬೆಲೆ ಬಾಳುವ ವಸ್ತುಗಳನ್ನು ಬ್ಯಾಗೇಜ್‌ನಲ್ಲಿ ಕಳುಹಿಸುವ ವೇಳೆ ಸುಲಭವಾಗಿ ಲಾಕ್ ತೆರೆಯುವ ಮೂಲಕ ಕಳವು ಮಾಡುತ್ತಿದ್ದರೆಂದು ಪತ್ತೆಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!