ಮಂಗಳೂರು:ನಗರದ ಅಡ್ಯಾರ್ ತಜಿಪೋಡಿ ಎಂಬಲ್ಲಿ ನಡೆದ ದನ ಕಳ್ಳತನ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸರು ಪತ್ತೆಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೆ.13ರಂದು ಬೆಳಗಿನ ಜಾವ ಉಮೇಶ್ ಆಳ್ವ ಎಂಬವರ ಮನೆ ಆವರಣದಿಂದ ಒಂದು ಕ್ರಾಸ್ ಜರ್ಸಿ ಹಸುವನ್ನು ಕದ್ದುಕೊಂಡು ಹೋಗಿದ್ದ ಪ್ರಕರಣವನ್ನು ಠಾಣಾ ಅ.ಕ್ರ.144/2025, ಕಲಂ 303(2) ಐಪಿಸಿ ಅಡಿಯಲ್ಲಿ ದಾಖಲಿಸಲಾಗಿತ್ತು.

🔹 ಬಂಧಿತ ಆರೋಪಿಗಳು:

1. ಶಾಬಾಜ್ ಅಹ್ಮದ್ (ತಂದೆ: ಮೊಹಮ್ಮದ್ ನೌಷಾದ್) – ಗಾಣದಬೆಟ್ಟು ಮನೆ, ಅಡ್ಯಾರ್, ಕಣ್ಣುರು, ಮಂಗಳೂರು


2. ಮೊಹಮ್ಮದ್ ಸುಹಾನ್ (ತಂದೆ: ಸುಲೈಮಾನ್) – ಯಶಸ್ವಿ ಹಾಲ್ ಬಳಿ ಮನೆ, ಅರ್ಕುಳ, ವಳಚ್ಚಿಲ್, ಮಂಗಳೂರು


3. ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ (ತಂದೆ: ಅಬ್ದುಲ್ ಖಾದರ್) – ಜುಮ್ಮಾ ಮಸೀದಿ ಬಳಿ ಮನೆ, ಅಡ್ಯಾರ್, ಮಂಗಳೂರು



🔸 ಶಾಬಾಜ್ ಮತ್ತು ಸುಹಾನ್ ದನವನ್ನು ಕದ್ದಿದ್ದು, ಅದನ್ನು ಖಾದರ್ ಮೊಹಮ್ಮದ್‌ಗೆ ಮಾರಾಟ ಮಾಡಿದ್ದಾರೆ. ಆತನು ಮಾಂಸ ಮಾಡಲು ಖರೀದಿಸಿದ್ದ ವೇಳೆ ಪೊಲೀಸರು ದನವನ್ನು ಜೀವಂತವಾಗಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

👉 ಆರೋಪಿಗಳ ವಿರುದ್ದ ಹಲವು ಹಳೆಯ ಪ್ರಕರಣಗಳು ದಾಖಲಾಗಿವೆ:

ಶಾಬಾಜ್ ಅಹ್ಮದ್ – ಒಂದು ಕೊಲೆ, ಎರಡು ಕೊಲೆ ಪ್ರಯತ್ನ, ಒಂದು ದೊಂಬಿ ಪ್ರಕರಣ (ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ಠಾಣೆ)

ಮೊಹಮ್ಮದ್ ಸುಹಾನ್ – ಒಂದು ಎನ್.ಡಿ.ಪಿ.ಎಸ್ ಪ್ರಕರಣ (ಉಳ್ಳಾಲ ಠಾಣೆ)

ಖಾದರ್ ಮೊಹಮ್ಮದ್ @ ಕೋಳಿ ಮೋನಕ್ಕ – ಒಂದು ಗೋ ಹತ್ಯೆ ಪ್ರಕರಣ (ಮಂಗಳೂರು ಗ್ರಾಮಾಂತರ ಠಾಣೆ, 2024)


ಪೊಲೀಸರು ತಿಳಿಸಿದ್ದಾರೆ, ಆರೋಪಿ ತ್ರಯ ದನವನ್ನು ವಳಚ್ಚಿಲ್ ಅಬ್ದುಲ್ ಖಾದರ್ ಮನೆಗೆ ಹೊಂದಿಕೊಂಡ ಶೆಡ್‌ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ – 2020ರ ಪ್ರಕಾರ ಜಪ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!