ಪುತ್ತೂರು: ಪುತ್ತೂರು ತಾಲೂಕು ಕಸ್ಸಾ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜುಲೈ 14ರಂದು ಸಂಜೆ 4 ಗಂಟೆ ಸುಮಾರಿಗೆ ಒಬ್ಬ ಅಪರಿಚಿತ ಗಂಡಸು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಸ್ಥಳೀಯ ಸಮಾಜ ಸೇವಕರಾದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ಇತರರು ಕೂಡಿಕೊಂಡು ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಆ ನಂತರ ಹೆಚ್ಚಿನ ಚಿಕಿತ್ಸೆಗೆ ಜುಲೈ 30ರಂದು 108 ಅಂಬುಲೆನ್ಸ್‌ನಲ್ಲಿ ಮಂಗಳೂರಿನ ವೆನ್ನಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 18ರಂದು ಬೆಳಿಗ್ಗೆ 4.02ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆಯಿಂದ ತಿಳಿಸಲಾಗಿದೆ.

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಮೃತರ ಹೆಸರು-ವಿಳಾಸ ಪತ್ತೆಯಾಗಿಲ್ಲ.

ಮೃತರ ವೈಶಿಷ್ಟ್ಯಗಳು:

ಹೆಸರು (ಸೂಚನೆ): ಆನಂದ, ಅಂದಾಜು ವಯಸ್ಸು 60 ವರ್ಷ.

ಎತ್ತರ: ಸುಮಾರು 5.6 ಅಡಿ, ಸಪೂರ ಶರೀರ.

ಚಹರೆ: ಕೋಲು ಮುಖ, ಕಪ್ಪು-ಬಿಳಿ ಕೂದಲು, ಕಪ್ಪು-ಬಿಳಿ ಮೀಸೆ ಮತ್ತು ಗಡ್ಡ, ಎಣ್ಣೆ ಕಪ್ಪು ಮೈಬಣ್ಣ.

ಬಟ್ಟೆ: ಹಿತ್ತಳ ಬಣ್ಣದ ಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಬರ್ಮುಡಾ ಚಡ್ಡಿ.


ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿ ಮಾಹಿತಿ ನೀಡಬಲ್ಲವರು ತಕ್ಷಣ ಪುತ್ತೂರು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

📞 ಸಂಪರ್ಕ: 08251-230555

Leave a Reply

Your email address will not be published. Required fields are marked *

Join WhatsApp Group
error: Content is protected !!