ತಮ್ಮ ಇಬ್ಬರು ಮಕ್ಕಳು ನನ್ನ ಅಂತ್ಯಕ್ರಿಯೆಯನ್ನು ನಡೆಸುವಂತಿಲ್ಲ,” ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅವರು ವಿಲ್ ಮಾಡಿಸಿಟ್ಟಿದ್ದಾರೆ ಎನ್ನುವ ವಿಷಯ ಮೈಸೂರಿನಲ್ಲಿ ಗುರುವಾರ ಕೆಲಕಾಲ ಗೊಂದಲ ಸೃಷ್ಟಿಸಿತು. ಬೆಂಗಳೂರಿನಿಂದ ಆಂಬ್ಯುಲೆನ್ಸ್ ಮೂಲಕ ಭೈರಪ್ಪ ಅವರ ಪಾರ್ಥಿವ ಶರೀರವನ್ನು ತಂದು ಮೈಸೂರಿನ ಕಲಾಮಂದಿರದ ಸಮೀಪವಿರುವ ಕಿಂದರಿ ಜೋಗಿ ಆವರಣದಲ್ಲಿ ಇರಿಸಲಾಯಿತು
ಇದೇ ವೇಳೆ ಅಭಿಮಾನಿಯೊಬ್ಬರು ಆಗಮಿಸಿ ”ತಮ್ಮ ಅಂತ್ಯಕ್ರಿಯೆಯನ್ನು ಇಬ್ಬರು ಮಕ್ಕಳಾದ ಉದಯ ಶಂಕರ್ ಹಾಗೂ ರವಿಶಂಕರ್ ಮಾಡುವಂತಿಲ್ಲ,” ಎಂದು ಭೈರಪ್ಪನವರು ವಿಲ್ ಮಾಡಿಸಿಟ್ಟಿದ್ದಾರೆ ಎಂದು ವಿಲ್ ಪ್ರತಿಯನ್ನು ಪ್ರದರ್ಶಿಸಿದರು.
”ವಿಲ್ ಅನ್ನು 2025ರ ಜೂ. 18ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಹೆಚ್ಚುವರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾಡಿಸಲಾಗಿದೆ. ಇದರ ಪ್ರಕಾರ ಇಬ್ಬರು ಮಕ್ಕಳಾದ ಉದಯಶಂಕರ್, ರವಿ ಶಂಕರ್ ಅಂತ್ಯ ಸಂಸ್ಕಾರ ಮಾಡಬಾರದು. ಹಾಸನದ ಚನ್ನಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಬೇಕು. ತಮ್ಮನ್ನು ಆರೈಕೆ ಮಾಡಿದ ಸಹನಾ ವಿಜಯಕುಮಾರ್ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಉಲ್ಲೇಖಿಸಿದ್ದಾರೆ,” ಎಂದು ತಿಳಿಸಿದರು.
ಇದರಿಂದ ಕಿಂದರಿಜೋಗಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಾಮಾಜಿಕ ಜಾಲತಾಣದಲ್ಲೂ ವಿಲ್ ಪ್ರತಿಗಳು ಹರಿದಾಡಲು ಶುರುವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಭಿಮಾನಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ಸಂಬಂಧ ವಿಲ್ ಮಾಡಿಸಿದ ವಕೀಲರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.














