
ಬಂಟ್ವಾಳ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಳಿಕೆ ಗ್ರಾಮದ ಮಹಮ್ಮದ್ ಇಷ್ರಾದ್ ಕೆ.ಎ (32) ಅಲಿಯಾಸ್ ಇರ್ಷಾದ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ಕ್ರ.26/2018ರಲ್ಲಿ ದಾಖಲಾದ ಕಲಂ 447, 341, 504, 323, 324, 354, 506 r/w 34 IPC ಪ್ರಕರಣದಲ್ಲಿ ಈತನ ವಿರುದ್ಧ ಮಾನ್ಯ ನ್ಯಾಯಾಲಯವು C.C 1565/2023ರಲ್ಲಿ ವಾರಂಟ್ ಹೊರಡಿಸಿತ್ತು. ತಲೆಮರೆಸಿಕೊಂಡಿದ್ದ ಇರ್ಷಾದ್‌ನ್ನು 26-09-2025 ರಂದು ಅಳಿಕೆಯಲ್ಲಿ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ನ್ಯಾಯಾಲಯವು ಇವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇರ್ಷಾದ್ ವಿರುದ್ಧ ಇನ್ನೂ ಹಲವಾರು ಗಂಭೀರ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ:
ಪುತ್ತೂರು ನಗರ ಠಾಣೆ Cr.25/2019 – ಕಲಂ 447, 326, 324, 120(b), 307, 109, 201, 34 IPC ಮತ್ತು ಆರ್ಮ್ಸ್ ಆಕ್ಟ್ ಸೆ.3,25
ಬಂಟ್ವಾಳ ನಗರ ಠಾಣೆ Cr.103/2020 – NDPS ಆಕ್ಟ್ ಸೆ. 8(c), 20(b)
ಪುತ್ತೂರು ಗ್ರಾಮಾಂತರ ಠಾಣೆ Cr.127/2013 – ಕಲಂ 457, 380 IPC






