ಪುತ್ತೂರು: ನೆಕ್ಕಿಲಾಡಿ ಗ್ರಾಮದ ಎನ್. ಅಬೂಬಕ್ಕರ್ (59) ಎಂಬುವರಿಗೆ ಸೇರಿದ ಜಮೀನಿನ ಆರ್‌ಟಿಸಿಯನ್ನು ನಕಲಿ ದಾಖಲೆ ಮಾಡಿಕೊಂಡು ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿರುವ ಪ್ರಕರಣ ಪತ್ತೆಯಾಗಿದೆ.

ಫಿರ್ಯಾದಿದಾರ ಎನ್. ಅಬೂಬಕ್ಕರ್ ಅವರು ತಮ್ಮ ಸ.ನಂ. 33/*/9ರಲ್ಲಿ 0.08.50 ಎಕ್ರೆ ಜಮೀನಿನ ಪಹಣಿ ಪತ್ರವನ್ನು ಪುತ್ತೂರು ತಾಲೂಕು ಕಚೇರಿಯಿಂದ ತೆಗೆದುಕೊಂಡಾಗ, ಅದರಲ್ಲಿ ರೂ. 2 ಲಕ್ಷ ಮುತ್ತುಗೋಲು ದಾಖಲಾದಿರುವುದು ಕಂಡುಬಂದಿದೆ. ಇದರಿಂದ ಸಂಶಯಗೊಂಡ ಅವರು ಮ್ಯೂಟೇಷನ್‌ ರಿಜಿಸ್ಟ್ರಾರ್ ಹಾಗೂ ಇ-ಕೋರ್ಟ್ ಸೇವೆಗಳ ಮೂಲಕ ವಿಚಾರಣೆ ನಡೆಸಿದಾಗ, ಸಯ್ಯದ್ ಮೊಹಮ್ಮದ್ ನಾಸಿಂ ಎಂಬವರ ಜಾಮೀನಿಗೆ ಸಲ್ಲಿಸಿದ ದಾಖಲೆಗಳಲ್ಲಿ ತಮ್ಮ ಜಮೀನಿನ ಆರ್‌ಟಿಸಿ ಬಳಸಲಾಗಿದೆ ಎಂಬುದು ಬಹಿರಂಗವಾಗಿದೆ.

ಜಾಮೀನುದಾರರಾಗಿ ಹಾಜರಾಗಿದ್ದ ಅಬೂಬಕ್ಕರ್ (32), ತಂದೆ: ಹಮ್ಮದ್ ಬ್ಯಾರಿ, ಪಡ್ನೂರು ನಿವಾಸಿ, ಅವರು ಫಿರ್ಯಾದಿದಾರನ ಜಮೀನು ದಾಖಲೆಗಳನ್ನು ತಮ್ಮದೇನೆಂದು ತೋರಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆಳೆದು ಆರೋಪಿಗೆ ಜಾಮೀನು ದೊರಕುವಂತೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 84/2025, ಕಲಂ 417, 419 ಐಪಿಸಿ ಅಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!