
ಪುತ್ತೂರು: ಬೋಳ್ವಾರದ ಪ್ರಗತಿ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಪ್ರಗತಿ ನರ್ಸಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಶಾರದಾ ಪೂಜಾ ಕಾರ್ಯಕ್ರಮ ಜರುಗಿತು.
ಪುರೋಹಿತರು ಶ್ರೀ ನಾರಾಯಣ ಪ್ರಸಾದ್ ಮತ್ತು ರಾಮಚಂದ್ರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಡಾ. ಶ್ರೀಪತಿ ರಾವ್, ಟ್ರಸ್ಟಿ ಶ್ರೀಮತಿ ಸುಧಾ ಎಸ್. ರಾವ್, ಆಡಳಿತಾಧಿಕಾರಿ ಶ್ರೀಮತಿ ಪ್ರೀತಾ ಹೆಗ್ಡೆ, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಶ್ರೀಮತಿ ಹೇಮಲತಾ, ಉಪನ್ಯಾಸಕ ವೃಂದ, ಆಸ್ಪತ್ರೆಯ ಎಚ್.ಆರ್. ಶ್ರೀಮತಿ ಉಷಾ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಮೂರು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಪಿಲಿಪಜ್ಜೆಯ ಹುಲಿಕುಣಿತ ತಂಡದ 15 ಮಂದಿ ಹುಲಿವೇಷಧಾರಿಗಳು ನೀಡಿದ ಕುಣಿತ ವಿದ್ಯಾರ್ಥಿಗಳ ಮನಗೆದ್ದಿತು. ಕೆಲವರು ಅವರ ಜೊತೆಗೂಡಿ ಕುಣಿದು ಸಂಭ್ರಮಿಸಿದರು.






