ಬೆಂಗಳೂರಲ್ಲಿ (Bengaluru) ಆಟೋ (Auto ) ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದ ಪ್ರಕರಣದಲ್ಲಿ ಯುವತಿ (Girl) ಮೇಲೆ ಹಲ್ಲೆ ಮಾಡಿದ್ದ ಡ್ರೈವರ್ (Driver) ಬಂಧನವಾಗಿದೆ.

ಆಟೋ ಬುಕ್‌ ಮಾಡಿ ರದ್ದು ಪಡಿಸಿದ್ದಕ್ಕೆ ಈಶಾನ್ಯ ಭಾರತದ ಮಹಿಳೆಯೊಬ್ಬರನ್ನು ಆಟೋ ಚಾಲಕ ನಿಂದಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಸದ್ಯ ಈ ಘಟನೆಯ ಸಂಬಂಧ ಆಟೋ ಚಾಲಕ ಪವನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಭಾರತದ ಮಹಿಳೆ ಇನ್‌ಸ್ಟಾದಲ್ಲಿ ತನಗಾದ ಕಹಿ ಘಟನೆ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಳು. ಈ ಪೋಸ್ಟ್‌ಗೆ ರಿಪ್ಲೈ ಮಾಡಿದ್ದ ಪೊಲೀಸರು ನೇರವಾಗಿ ದೂರು ನೀಡಲು ಸಂಪರ್ಕಿಸುವಂತೆ ಹೇಳಿದ್ದರು. ಅದರಂತೆ ಆಕೆ ಕೊತ್ತನೂರು ಪೊಲೀಸರಿಗೆ ಕೊಟ್ಟ ದೂರಿನ ಪ್ರಕಾರ ಪೊಲೀಸರು ಆಟೋ ಚಾಲಕ ಪವನ್‌(21)ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!