
ಪುತ್ತೂರು, ಅ.15 : ಉಪ್ಪಿನಂಗಡಿ ಹಾಗೂ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇರಿದಂತೆ ಬಂಟ್ವಾಳ ಉಪವಿಭಾಗದ ಅನೇಕ ಠಾಣೆಗಳಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ವಾರೆಂಟ್ ಹೊರಡಿಸಲಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಉಪವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್., ಉಪನಿರೀಕ್ಷಕ ಅವಿನಾಶ್ ಎಚ್ (L&O), ಕಡಬ ಠಾಣೆಯ ಉಪನಿರೀಕ್ಷಕ ಅಭಿನಂದನ್ ಎಸ್ ಅವರ ನೇತೃತ್ವದಲ್ಲಿ ನಡೆದ ಸಂಯುಕ್ತ ಕಾರ್ಯಾಚರಣೆಯಲ್ಲಿ ಈ ಬಂಧನ ಸಾಧ್ಯವಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಚ್‌ಸಿ 826 ಶಿವರಾಮ ರೈ ಹಾಗೂ ಕಡಬ ಠಾಣೆಯ ಹೆಚ್‌ಸಿ 1028 ಗಣೇಶ್ ಎನ್ ಅವರು ಖಚಿತ ಮಾಹಿತಿಯ ಆಧಾರದ ಮೇಲೆ ದಿನಾಂಕ 15-10-2025 ರಂದು ವಾರೆಂಟ್ ಅಸಾಮಿ ಫಾರೂಕ್ @ ಉಮ್ಮರ್ ಫಾರೂಕ್ (32), ತಂದೆ ಇಬ್ರಾಹಿಂ, ವಾಸ: ಪೆರುವ ಮನೆ, ಸಜಿಪ, ಬಂಟ್ವಾಳ ತಾಲೂಕು ಇವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. ಸಂಖ್ಯೆ 38/2020 (ಕಲಂ 457, 380 IPC), 39/2020 (ಕಲಂ 380, 201, 34 IPC), 48/2012 (ಕಲಂ 379, 201, 34 IPC), 119/2020 (ಕಲಂ 457, 380 IPC) ಸೇರಿದಂತೆ, ಕಡಬ ಠಾಣೆಯಲ್ಲಿ ಅ.ಕ್ರ. ಸಂಖ್ಯೆ 43/2020, 44/2020, 45/2020, 46/2020 (ಕಲಂ 457, 380 IPC) ಅಡಿ ಮತ್ತು ವಿಟ್ಲ, ಬಂಟ್ವಾಳ ನಗರ, ಗ್ರಾಮಾಂತರ, ಕೋಣಾಜೆ, ಬರ್ಕೆ ಹಾಗೂ ಬಜಪೆ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.






