ಕಡಬ: ಕಡಬ ಗ್ರಾಮದ ಸಂತೆಕಟ್ಟೆ ಮೀನು ಮಾರಾಟಕಟ್ಟೆಯಲ್ಲಿ ನವೆಂಬರ್‌ 1ರಂದು ಬೆಳಿಗ್ಗೆ ಮೀನು ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ಸಂಭವಿಸಿ ಬಳಿಕ ಪರಸ್ಪರ ಹೊಡೆದಾಟ ನಡೆದ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ಅಭಿನಂದನ್ ಎಂ.ಎಸ್. ರವರು ಪರಿಶೀಲನೆ ನಡೆಸಿದಾಗ, ರಾಜು ಮ್ಯಾಥ್ಯೂ ಹಾಗೂ ಆದಂ ಎಂಬ ಇಬ್ಬರ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಸಾರ್ವಜನಿಕ ಸ್ಥಳದಲ್ಲೇ ರಾಜು ಮ್ಯಾಥ್ಯೂ, ಆದಂ, ಫಯಾಜ್, ರಕ್ಷೀತ್ ಮಾಣಿ ಹಾಗೂ ನೌಫಾಲ್ ಎಂಬವರು ಪರಸ್ಪರ ಹೊಡೆದಾಟ ನಡೆಸಿರುವುದು ಪತ್ತೆಯಾಗಿದೆ.

ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವಂತೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.73/2025, ಕಲಂ 194(2) BNS-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!