ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ವಿಚಿತ್ರ ಪ್ರೇಮಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಕ್ಕನಿಗೆ ಆರೋಗ್ಯ ಸರಿಯಿರದ ಕಾರಣ ಅಕ್ಕನ ಆರೈಕೆಗೆ ಆಗಾಗ ಮನೆಗೆ ಹೋಗುತ್ತಿದ್ದ 18 ವರ್ಷದ ಯುವತಿ, ಅಕ್ಕನ ಗಂಡನೊಂದಿಗೆ ಪ್ರೀತಿಗೆ ಬಿದ್ದು ಮದುವೆಯಾದ ಘಟನೆ ಸುದ್ದಿಯಾಗಿದೆ.

ಅಕ್ಕನ ಮನೆಯಲ್ಲಿ ಅಡುಗೆ ಕೆಲಸ ನೋಡಿಕೊಳ್ಳುತ್ತಿದ್ದೆ. ಬಾವನೊಂದಿಗೆ ಮಾತನಾಡುವುದು ಶುರುವಾಗಿ, ನಿಧಾನವಾಗಿ ಹತ್ತಿರವಾದ್ವಿ. ಪ್ರೀತಿ ಹುಟ್ಟಿತು. ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾದೆವು,” ಎಂದಿದ್ದಾಳೆ. ಗುಲಾಬಿ ಬಣ್ಣದ ಸೀರೆಯಲ್ಲಿ ಮಾಧ್ಯಮದ ಮುಂದೆ ನಿಂತ ನವವಧು, “ಸಮಾಜ ಏನೇ ಹೇಳಲಿ, ನಮಗೆ ಪ್ರೀತಿ ಮುಖ್ಯ. ಪ್ರೀತಿಗೆ ವಯಸ್ಸು ಅಡ್ಡಿ ಅಲ್ಲ,” ಎಂದು ಯುವತಿ ಹೇಳಿದ್ದಾಳೆ.

ಬಿಳಿ ಕೂದಲು, ಗಡ್ಡದೊಂದಿಗೆ ಕಾಣಿಸಿಕೊಂಡ 55 ವರ್ಷದ ವರನೂ ತನ್ನ ಹೊಸ ಹೆಂಡತಿಯ ಪರವಾಗಿ ಮಾತನಾಡುತ್ತ, “ಈ ಮದುವೆ ಪರಸ್ಪರ ಒಪ್ಪಿಗೆಯಿಂದ ನಡೆದದ್ದು. ಯಾರ ಮೇಲೂ ಒತ್ತಾಯ ಇರಲಿಲ್ಲ,” ಎಂದು ಸ್ಪಷ್ಟಪಡಿಸಿದ್ದಾನೆ. “ನನಗೆ ವಯಸ್ಸಾದವನು ಅಂತ ಹೇಳೋದನ್ನು ಬೇಸರಪಡುತ್ತೇನೆ,” ಎಂದು ಹೇಳಿದ ಆತಕ್ಕೆ ಹೊಸ ಹೆಂಡತಿ ಸಾಥ್ ನೀಡಿದ್ದು, “ನನ್ನ ದೃಷ್ಟಿಯಲ್ಲಿ ಅವರು ವಯಸ್ಸಾದವರು ಅಲ್ಲ. ಅವರ ಕೂದಲು ಬೆಳ್ಳಗಾಗಿದೆ ಅಷ್ಟೆ, ಬಣ್ಣ ಹಚ್ಚಿದರೆ ಕಪ್ಪಾಗುತ್ತದೆ,” ಎಂದು ಹಾಸ್ಯಮಾಡಿದ್ದಾಳೆ.

ಈ ಘಟನೆ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳ ನಡುವೆ ಚರ್ಚೆ ಹುಟ್ಟಿಸಿದೆ. ಕೆಲವರು “ಪ್ರೀತಿಗೆ ವಯಸ್ಸು ಅಡ್ಡಿ ಅಲ್ಲ” ಎಂದು ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು “ವಯಸ್ಸಿನ ಅಂತರದಿಂದ ಸಮಸ್ಯೆ ಉಂಟಾಗಬಹುದು, ಇದು ತಪ್ಪು ನಿರ್ಧಾರ” ಎಂದು ಟೀಕಿಸಿದ್ದಾರೆ. ಈ ಪ್ರೇಮಕಥೆಯ ಹಿನ್ನೆಲೆಯಾಗಿ ಅಕ್ಕನ ಆರೋಗ್ಯ ಸ್ಥಿತಿ ಹಾಗೂ ಅವಳ ಪ್ರತಿಕ್ರಿಯೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ. ಆದರೆ ಈ ಘಟನೆ ಈಗ ಉತ್ತರ ಪ್ರದೇಶದಲ್ಲಷ್ಟೇ ಅಲ್ಲ, ದೇಶದಾದ್ಯಂತ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!