ಪುತ್ತೂರು: ವಿಶ್ವ ಮಧುಮೇಹ ದಿನದ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್‌ನಲ್ಲಿರುವ ಡಾ. ನಝೀರ್ಸ್ ಡಯಾಬಿಟಿಸ್ ಸೆಂಟರ್ ನಲ್ಲಿ ಉಚಿತ ಥೈರಾಯ್ಡ್, HBA1C, ಶುಗರ್, ಕೊಲೆಸ್ಟ್ರಾಲ್ ಹಾಗೂ ಮೂಳೆ ಸಾಂದ್ರತೆ (BMD) ಮಾಹಿತಿ ಮತ್ತು ತಪಾಸಣಾ ಶಿಬಿರ ನವೆಂಬರ್ 14ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರುಗಿತು.
ಶಿಬಿರಕ್ಕೆ ಸಾಕಷ್ಟು ಸಾರ್ವಜನಿಕರು ಆಗಮಿಸಿ ಪ್ರಯೋಜನ ಪಡೆದರು.
“ಮಧುಮೇಹ ದೊಡ್ಡ ಕಾಯಿಲೆಯಲ್ಲ; ಜೀವನಶೈಲಿ ಬದಲಿಸಿದ್ದರೆ ಗೆಲ್ಲಬಹುದು” — ಡಾ. ನಝೀರ್
ತಮ್ಮ ಮಾತಿನಲ್ಲಿ ವೈದ್ಯಕೀಯ ಹಾಗೂ ಮಧುಮೇಹ ತಜ್ಞರಾದ ಡಾ. ನಝೀರ್ ಅಹಮದ್ ರವರು ಮಾತನಾಡಿ,
“ಮಧುಮೇಹ ಎಂಬುದು ಹೆದರಬೇಕಾದ ಕಾಯಿಲೆಯಲ್ಲ. ಸಕಾರಾತ್ಮಕ ಚಿಂತನೆ ಮತ್ತು ನಿಯಂತ್ರಿತ ಜೀವನಶೈಲಿಯಿದ್ದರೆ, ಮಧುಮೇಹ ಇಲ್ಲದವರಂತೆ ಆರೋಗ್ಯಕರ ಜೀವನ ನಡೆಸಬಹುದು. ಮಧುಮೇಹ ನಿಯಂತ್ರಣದಲ್ಲಿ ವೈದ್ಯರ ಪಾತ್ರ ಕೇವಲ ಒಂದು ಶೇಕಡಾ; ಉಳಿದ 99 ಶೇಕಡಾ ರೋಗಿಯ ಪರಿಶ್ರಮ” ಎಂದು ತಿಳಿಸಿದರು.
“ಬೆಳಿಗ್ಗೆ ವ್ಯಾಯಾಮ ಮಾಡಿ ಬಳಿಕ ಜಂಕ್‌ಫುಡ್ ಸೇವಿಸಿದರೆ ಪ್ರಯೋಜನ ಇಲ್ವು. ಪುಸ್ತಕ ಓದಿ ಈಜು ಕಲಿಯಲಾಗದಂತೆ, ಯೂಟ್ಯೂಬ್ ವೀಕ್ಷಿಸಿ ಮಧುಮೇಹ ನಿಯಂತ್ರಣ ಸಾಧ್ಯವಿಲ್ಲ. ವೈದ್ಯರ ಸಲಹೆ ಪಾಲನೆ ಹಾಗೂ ಆಹಾರಶೈಲಿಯಲ್ಲಿ ಬದಲಾವಣೆ ಅತ್ಯಗತ್ಯ” ಎಂದರು.
“ಆರೋಗ್ಯವಂತ ಸಮಾಜಕ್ಕೆ ಡಾ. ನಝೀರ್ ಅವರ ಕೊಡುಗೆ ಶ್ಲಾಘನೀಯ” — ಪ್ರೊ. ದತ್ತಾತ್ರೇಯ ರಾವ್
ರೋಟರಿ ಕ್ಲಬ್ ಪುತ್ತೂರು ನಿಯೋಜಿತ ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್ ಸ್ವಾಗತಿಸಿ ಮಾತನಾಡಿ,
“ಡಾ. ನಝೀರ್ ರವರು ವರ್ಷಪೂರ್ತಿ ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದಾರೆ. ಅವರ ಸೇವೆಯಿಂದ ಸಮಾಜಕ್ಕೂ, ರೋಟರಿ ಕ್ಲಬ್‌ನ ಇಮೇಜಿಗೂ ಶೋಭೆ ಸೇರಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯಬೇಕಾಗಿದೆ” ಎಂದು ತಿಳಿಸಿದರು.
ಶಿಬಿರದ ವ್ಯವಸ್ಥೆ ಮತ್ತು ಸಹಕಾರ
ಫಲಾನುಭವಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ರೋಟರಿ ಸದಸ್ಯ ಹೆರಾಲ್ಡ್ ಮಾಡ್ತಾ ವಂದಿಸಿದರು.
ರೋಟರಿ ಪುತ್ತೂರು ಸದಸ್ಯ ವಿಶ್ವನಾಥ ಗೌಡ, ರೋಟರ್ಯಾಕ್ಟ್ ಅಧ್ಯಕ್ಷ ವಿನೀತ್, ಹರ್ಷಿತ್, ವಿವಿಧ ಔಷಧ ಕಂಪನಿಗಳ ಪ್ರತಿನಿಧಿಗಳು, ಅಗಿಲಾಸ್ ಲ್ಯಾಬ್, ಥೈರೋಕೇರ್ ಹಾಗೂ ಡಾ. ನಝೀರ್ಸ್ ಡಯಾಬಿಟಿಸ್ ಸೆಂಟರ್ ಸಿಬ್ಬಂದಿಗಳು ಶಿಬಿರ ಯಶಸ್ವಿಗೆ ಸಹಕರಿಸಿದರು.
ವಿಶೇಷ ರಿಯಾಯಿತಿ ದರದಲ್ಲಿ ಲಭ್ಯ
ಗ್ಲುಕೊಮೀಟರ್, ಡಿಜಿಟಲ್ BP ಮೆಷಿನ್‌ಗಳು,
ಸತತ 14 ದಿನಗಳ ರಕ್ತಸಕ್ಕರೆಯ ಏರಿಳಿತ ಅಳೆಯುವ Freestyle Libre CGMS system ಕುರಿತು ಡಾ. ನಝೀರ್ ಮಾಹಿತಿ ನೀಡಿದರು.
ಈ ಎಲ್ಲಾ ಸಾಧನಗಳು ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿಯಲ್ಲಿ ಲಭ್ಯ.
ಆಸಕ್ತರು ಡಾ. ನಝೀರ್ಸ್ ಡಯಾಬಿಟಿಸ್ ಸೆಂಟರ್ ಸಂಪರ್ಕಿಸಬಹುದು.
—
ಶಿಬಿರದಲ್ಲಿ ಭಾಗವಹಿಸಿದವರ ಸಂಖ್ಯೆ
BMD – 41 ಮಂದಿ
ಕೊಲೆಸ್ಟ್ರಾಲ್ – 50 ಮಂದಿ
ಥೈರಾಯ್ಡ್ – 47 ಮಂದಿ
ಮಧುಮೇಹ (ಶುಗರ್) – 40 ಮಂದಿ
HBA1C – 30 ಮಂದಿ














