ಪುತ್ತೂರು; ಅಬ್ದುಲ್ ಲತೀಫ್ ಕರಾಯ, ಇವರು ಕೂಲಿ ಕಾಮಿಕರು, ೯ ಸೆಂಟ್ಸ್ ಜಾಗದಲ್ಲಿ ಮನೆ ಮಾಡಿ ಕುಟುಂಬದ ಜೊತೆ ವಾಸಮಾಡುತ್ತಿದ್ದಾರೆ. ಇವರ ಮಗಳ ಮದುವೆ ನಿಗಧಿಯಾಗಿದೆ, ಮದುವೆಗೆ ಹಣಕಾಸಿನ ಕೊರತೆಯಿದೆ, ಮಗಳ ಮದುವೆಗೆ ಜಾಗದ ಅಡವಿಟ್ಟು ಬ್ಯಾಂಕಿಂದ ಲೋನ್ ಪಡೆಯಬೇಕಿತ್ತು. ಲೋನ್ ಪಡೆಯಲು ಬೆಳ್ತಂಗಡಿ ತಹಶಿಲ್ದಾರ್‌ನಿಂದ ಒಂದು ಎನ್‌ಒ ಸಿ ಬೇಕಿತ್ತು, ಈ ಎನ್ ಒಸಿಗಾಗಿ ಅಲೆದಾಡಿದ್ದಾರೆ ಲತಫಿರವರು, ಬೆಳ್ತಂಗಡಿಯ ಜನಪ್ರತಿನಿಧಿಯವರ ಬಳಿ ಹತ್ತಾರು ಬಾರಿ ತೆರಳಿದ್ದಾರೆ ಆದರೆ ಅವರಿಗೆ ಎನ್‌ಒಸಿ ಸಿಗಲೇ ಇಲ್ಲ…
ಅಲೆದಾಡಿ ಸುಸ್ತಾಗಿ ಇನ್ನೇನು ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರಲ್ಲಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಮಗಳ ಮದುವೆ ದಿನ ನಿಗದಿಯಾಗಿ ಹಣದ ಹೊಂದಾನಿಕೆಯಾಗದೆ ಕಷ್ಟಪಡುತ್ತಿದ್ದ ಲತೀಫ್‌ರವನ್ನು ಸಂಕಷ್ಟ ಕಂಡು ಮರುಗಿ ಶಾಸಕರು ಬೆಳ್ತಂಗಡಿ ತಹಶಿಲ್ದಾರ್‌ಗೆ ಕರೆ ಮಾಡಿ ವಿಷಯ ತಿಳಿಸಿ ಎನ್‌ಒಸಿ ಕೊಡುವಂತೆ ತಿಳಿಸಿದ್ದಾರೆ. ಶಾಸಕರ ಸೂಚನೆಯಂತೆ ಬೆಳ್ತಂಗಡಿ ತಹಶಿಲ್ದಾರ್ ಲತೀಫ್‌ರವರಿಗೆ ಎನ್‌ಒಸಿ ನೀಡಿದ್ದಾರೆ. ಈ ವಿಚಾರವನ್ನು ತಿಳಿಸಲು ಸೋಮವಾರ ಕಚೇರಿಗೆ ಬಂದ ಲತೀಫ್ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಶಾಸಕ ಅಶೋಕ್ ರೈ ಅವರ ಮಾನವೀತೆಗೆ ಶ್ಲಾಘನೆಯೂ ವ್ಯಕ್ತವಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!