ಪುತ್ತೂರು: ಬಲ್ನಾಡು ದೈವಸ್ಥಾನದ ಪಕ್ಕದಲ್ಲಿರುವ ಸುಮಾರು ಹತ್ತು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇಲ್ಲದೇ ಇದ್ದು ಈ ಬಗ್ಗೆ ಸೋಮವಾರದಂದು ಶಾಸಕ ಅಶೋಕ್ ರೈ ಬಳಿ ಆ ಭಾಗದ ಮನೆಯವರು ದೂರು ನೀಡಿದ್ದರು. ದೂರು ಸ್ವೀಕರಿಸಿ‌ಸಮಸ್ಯೆ ಆಲಿಸಿದ ಶಾಸಕರು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದರು.‌ಆಪ್ರಕಾರ ಸೋಮವಾರ ಸಂಜೆ ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚನೆಯನ್ನು ನೀಡಿದ್ದರು.

ನೀರಿನ ಪೈಪ್ ಅಳವಡಿಸುವಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ಅಡ್ಡಿಪಡಿಸಿದ್ದರು.  ಆಭಾಗಕ್ಕೆ ರಸ್ತೆ ಇದೆ. ರಸ್ತೆ ಬದಿ ಪೈಪ್ ಹಾಕಲು ಖಾಸಗಿ ವ್ಯಕ್ತಿಗಳು ಅಡ್ಡಿಯಾಗಿದ್ದರಿಂದ ಪೈಪ್ ಲೈನ್ ಹಾಕಲು ಸಾಧ್ಯವಾಗಿರಲಿಲ್ಲ. ರಸ್ತೆ ಬದಿಯಲ್ಲಿ ಪೈಪ್ ಹಾಕಿ ಕುಡಿಯುವ ನೀರು ವ್ಯವಸ್ಥೆ ಮಾಡಿ ಎಂದು ಶಾಸಕರು ನಗರಸಭಾ ಕಮಿಷನರ್ ವಿದ್ಯಾ ಕಾಳೆಗೆ ಸೂಚನೆ ನೀಡಿದ್ದರು. ಇಂದು‌ಪೈಪ್ ಲೈನ್ ಕಾಮಗಾರಿಗೆ ನಗರಸಭೆ ಚಾಲನೆ ನೀಡಿದ್ದು ವಾರದೊಳಗೆ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಆಗಲಿದೆ.
ಎಷ್ಟೋ ವರ್ಷದಿಂದ ಈ ಭಾಗದ ಜನರು ಕುಡಿಯುವ ನೀರಿನ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದು ಈ ಬಾರಿ‌ಶಾಸಕರ ಮೂಲಕ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.

ಬಲ್ನಾಡು ಪರಿಸರದ ಮಹಿಳೆಯರು‌ಬಂದು ತಮ್ಮ‌ಸಂಕಷ್ಟದ ಬಗ್ಗೆ ಹೇಳಿದ್ದರು.‌ನೆನ್ನೆಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಪೈಪ್ ಲೈನ್ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದೆ. ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದು. ಕುಡಿಯುವ ನೀರಿಗೆ ಅಡ್ಡಿ ಮಾಡುವುದು ಧರ್ಮವಲ್ಲ. ಅಡ್ಡಿ ಮಾಡಿದರೂ ಕಾನೂನು ಪ್ರಕಾರ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಯಾರಿಗೂ ತೊಂದರೆಯಾಗದಂತೆ ಕಾಮಗಾರಿ ನಡೆಯಲಿದೆ

ಅಶೋಕ್ ರೈ ಶಾಸಕರು,ಪುತ್ತೂರು

Leave a Reply

Your email address will not be published. Required fields are marked *

Join WhatsApp Group
error: Content is protected !!