ಫ್ಲೆಕ್ಸ್ (Flex) ಮತ್ತು ಬ್ಯಾನರ್ಗಳ ವಿಚಾರವಾಗಿ ಹೈಕೋರ್ಟ್ (High court) ನಿಷೇಧ ಹೇರಿದ್ದರೂ ಕೂಡ ಅದರಿಂದಾಗುತ್ತಿರುವ ತೊಂದರೆಗಳು ನಿಲ್ಲುತ್ತಿಲ್ಲ. ಇದರ ನಡುವೆಯೇ ನೆಲಮಂಗಲದಲ್ಲಿ (Nelamangala) ದುರಂತ ಘಟನೆಯೊಂದು ನಡೆದಿದೆ.

ರಜೆಯಲ್ಲಿ ಜರ್ಮನಿಯಿಂದ ಊರಿಗೆ ಬಂದಿದ್ದ ಯುವಕ ಫ್ಲೆಕ್ಸ್‌ಗೆ ಬಲಿಯಾದ ದಾರುಣ ಘಟನೆ ನಡೆದಿದೆ.

ನೆಲಮಂಗಲದಲ್ಲಿ ಈ ದುರಂತ ಘಟನೆ ನಡೆದಿದೆ. ರಸ್ತೆಯ ಪಕ್ಕದಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಬಿದ್ದು, 27 ವರ್ಷದ ಯುವಕ ತೇಜಸ್ ಸಾವನ್ನಪ್ಪಿದ್ದಾನೆ. ಬೈಕ್​ನಲ್ಲಿ ತೆರಳುತ್ತಿದ್ದಾಗ ತೇಜಸ್‌ ಮೇಲೆ ಫ್ಲೆಕ್ಸ್‌ ಕುಸಿದು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇನ್ನು ದುರಂತ ಘಟನೆಯ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯ ಪಕ್ಕದಲ್ಲಿ ಕಟ್ಟಿದ್ದ ಫ್ಲೆಕ್ಸ್​​ಗೆ ಗಾಡಿ ಟಚ್​​ ಆಗಿ ತೇಜಸ್‌ ನೆಲಕ್ಕೆ ಬಿದ್ದಿದ್ದ. ಆಗ ತನ್ನ ಮೇಲೆ ಫ್ಲೆಕ್ಸ್‌ ರಭಸವಾಗಿ ಬಿದ್ದು, ತಲೆಗೆ ಗಂಭೀರವಾದ ಗಾಯವಾಗಿತ್ತು. ಬಳಿಕ ಆತನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ತೇಜಸ್‌ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.

ನೆಲಮಂಗಲದ ನಿವಾಸಿಯಾಗಿದ್ದ ತೇಜಸ್​​ ಗೌಡ, ಜರ್ಮನಿಯಲ್ಲಿ ಎಂ.ಎಸ್​ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿಗೆ ರಜೆ ಇದ್ದ ಕಾರಣ ಕೆಲ ದಿನಗಳ ಹಿಂದೆ ಆತ ನೆಲಮಂಗಲಕ್ಕೆ ಬಂದಿದ್ದ. ಆದರೆ ಊರಿನಲ್ಲಿ ದುರಂತ ಘಟನೆಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!