ಹೈದರಾಬಾದ್‌ನಲ್ಲಿ 23 ಕೋಟಿ ರೂ. ವಂಚನೆ ಮಾಡಿದ್ದ ಇಬ್ಬರು ವಂಚಕರನ್ನು ಧಾರವಾಡ ಜಿಲ್ಲಾ ಪೊಲೀಸರು ಹುಬ್ಬಳ್ಳಿ, ಧಾರವಾಡ ಬೈಪಾಸ್‌ನಲ್ಲಿ ಬಂಧಿಸಿ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತರು ವಿವಿಧ ಪ್ರಕರಣಗಳಡಿ ಹೈದರಾಬಾದ್‌ನಲ್ಲಿ ಸುಮಾರು 23 ಕೋಟಿ ರೂಪಾಯಿಯಷ್ಟು ವಂಚನೆ ಮಾಡಿದ್ದರು.

ಇವರ ಮೇಲೆ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್‌ನಲ್ಲಿ ದೂರುಗಳು ಸಹ ದಾಖಲಾಗಿದ್ದವು. ಆದರೆ, ಇವರು ಪೊಲೀಸರ ಕೈಗೆ ಸಿಗದೇ ಬೇರೆ ಬೇರೆ ರಾಜ್ಯಗಳಿಗೆ ಸುತ್ತಾಡುತ್ತಿದ್ದರು. ಇವರು ಹುಬ್ಬಳ್ಳಿ, ಧಾರವಾಡ ಬೈಪಾಸ್ ಮೂಲಕ ಹೋಗುತ್ತಿದ್ದಾರೆ ಎಂಬ ಮಾಹಿತಿ ಹೈದರಾಬಾದ್ ಪೊಲೀಸರಿಂದ ಧಾರವಾಡ ಜಿಲ್ಲಾ ಪೊಲೀಸರಿಗೆ ಬಂದ ನಂತರ ಎಸ್‌ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಪೊಲೀಸರು ಬೈಪಾಸ್‌ನಲ್ಲಿ ಚೆಕ್ ಪೋಸ್ಟ್ ಮಾಡಿ ಹಾಗೂ ಹೈವೆ ಪ್ಯಾಟ್ರೋಲ್ ಬಳಸಿ ಆರೋಪಿತರನ್ನು ಬೈಪಾಸ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಂಚನೆ ಪ್ರಕರಣದ ಈ ಆರೋಪಿತರನ್ನು ಧಾರವಾಡ ಪೊಲೀಸರು ಬಂಧಿಸಿ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.

ಈ ಜೋಡಿ ತಪ್ಪಿಸಿಕೊಳ್ಳಲು ಸಹಾಯ‌ಮಾಡಿದ ಹೈದರಾಬಾದ್ ಸ್ಥಳೀಯ ಪೋಲಿಸ್ ಅಧಿಕಾರಿಯೊಬ್ಬರನ್ನು ಹೈದರಾಬಾದ್ ಪೋಲಿಸ್ ಆಯುಕ್ತ ಸಜ್ಜನ ಅವರು ಕಳೆದ ವಾರವಷ್ಟೆ ಅಮಾನತ್ತು ಮಾಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!