ಪುತ್ತೂರು ದರ್ಬೆಯಲ್ಲಿರುವ ಡಾ. ರಾಮಮೋಹನ್ ಅವರ ಇ.ಎನ್.ಟಿ ಕ್ಲಿನಿಕ್‌ನಲ್ಲಿ ರೋಗಿಯೊಬ್ಬ ದಾಂಧಲೆ ಎಬ್ಬಿಸಿ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ನವೆಂಬರ್ 29ರಂದು ನಡೆದಿದೆ.

ಪಿರ್ಯಾದಿದಾರರಾದ ಡಾ. ರಾಮಮೋಹನ್ ಅವರ ಮಾಹಿತಿಯಂತೆ, ಕ್ಲಿನಿಕ್‌ಗೆ ಸಲಹೆಗೆ ಬಂದಿದ್ದ ವ್ಯಕ್ತಿಗಳು ಕ್ಯೂನಲ್ಲಿ ಕಾಯುತ್ತಿರುವ ಸಂದರ್ಭದಲ್ಲಿ, ಹೊರಗಡೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ವ್ಯಕ್ತಿ ಕ್ಲಿನಿಕ್ ಒಳಗೆ ಬಂದು ತನ್ನ ಪರಿಚಯದವರನ್ನು ಆದ್ಯತೆಯೊಂದಿಗೆ ಒಳಗೆ ಕಳುಹಿಸದಿರುವ ಕಾರಣಕ್ಕೆ ವಾಗ್ವಾದ ಆರಂಭಿಸಿದ್ದಾನೆ. ಬಳಿಕ ಆಕ್ರೋಶಗೊಂಡ ಆತ, ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಅವರ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಹಾನಿಗೊಳಪಡಿಸಿ, ಹೊರಗಡೆ ಇದ್ದ ರೋಗಿಗಳಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಅವ್ಯಾಚವಾಗಿ ಬೈದು ಅಲ್ಲಿಂದ ಹೊರಟಿದ್ದಾನೆ.

ಸ್ಥಳೀಯರಿಂದ ದೊರೆತ ಮಾಹಿತಿಯಂತೆ, ಈ ಕೃತ್ಯ ನಡೆಸಿದ ವ್ಯಕ್ತಿಯನ್ನು ಪುತ್ತೂರು ಬಪ್ಪಳಿಗೆಯ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ಡಾ. ರಾಮಮೋಹನ್ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.116/2025 ರಂತೆ BNS 2023ರ ಕಲಂಗಳು 329(3), 324(4), 115(2), 352, 351(2) ಮತ್ತು Karnataka Prohibition of Violence against Medical Service Personnel and Damage to Property in Medicare Service Institutions Act 2009 ಅಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿತ ಇಬ್ರಾಹಿಂ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!