ಶಿವಮೊಗ್ಗ, ಡಿ.5 – ನಗರದ ಅಶ್ವಥ್ ನಗರ ಬಡಾವಣೆಯಲ್ಲಿ ಪ್ರಸಿದ್ಧ ಸ್ತ್ರೀರೋಗ ತಜ್ಞೆ ಡಾ. ಜಯಶ್ರಿ (56) ಹಾಗೂ ಅವರ ಪುತ್ರ ಆಕಾಶ್ (36) ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಮನೆಯೊಳಗೆ ರಾತ್ರಿಯೇ ನಡೆದ ಜಗಳದ ಬಳಿಕ ಇಬ್ಬರೂ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾದವು.

3 ಕೋಟಿಯ ಹಣದ ವಿಚಾರ ಜಗಳಕ್ಕೆ ಕಾರಣ?

ಪೊಲೀಸ್ ಮೂಲಗಳ ಪ್ರಕಾರ, ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಆಕಾಶ್ ತಾಯಿಯಿಂದ 3 ಕೋಟಿ ರೂಪಾಯಿ ಕೇಳಿದ್ದು, ಇದಕ್ಕೆ ಜಯಶ್ರಿ ಅಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು, ತಡರಾತ್ರಿ ವರೆಗೂ ಜಗಳ ನಡೆದಿತ್ತು. ನಂತರ ಇಬ್ಬರೂ ತಮ್ಮ ತಮ್ಮ ಕೋಣೆಗೆ ತೆರಳಿದ್ದರು.
ಆಕಾಶ್ ಪತ್ನಿ ಮೋನಿಕಾ ಬೇರೊಂದು ಕೋಣೆಯಲ್ಲಿ ಮಲಗಿದ್ದರಿಂದ ರಾತ್ರಿಯ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲವೆಂದು ಪೊಲೀಸರಿಗೆ ತಿಳಿಸಿದ್ದಾರೆ.

ಮಗ ಹಾಗೂ ಸೊಸೆ ಹೆಸರಿಗೆ ಆಸ್ತಿ ಬರೆದಿಟ್ಟು ಡಾ. ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ನೋಟ್ ಬರೆದಿಟ್ಟು ತಾಯಿ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಳಿಗ್ಗೆ ಗೃಹಸಹಾಯಕಿಯ ಮೂಲಕ ಘಟನೆ ಬೆಳಕಿಗೆ

ಬೆಳಿಗ್ಗೆ ಮನೆಕೆಲಸದವರರು ಕೊಠಡಿಗಳನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಮೃತರಾಗಿರುವುದು ಗೋಚರಿಸಿದ್ದು, ತಕ್ಷಣವೇ ಮಾಹಿತಿ ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.

ಒಂದೇ ಮನೆಯಲ್ಲಿ ನಾಲ್ಕು ದುರಂತಗಳು

ಈ ಮನೆಯಲ್ಲಿ ಕಳೆದ ದಶಕದಲ್ಲಿ ನಾಲ್ಕು ಜೀವತ್ಯಾಗದ ಘಟನೆಗಳು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
• ಜಯಶ್ರಿಯ ಪತಿ ಹಾಗೂ ಮಕ್ಕಳ ತಜ್ಞ ಡಾ. ನಾಗರಾಜ್ ಸುಮಾರು ಹತ್ತು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.
• 2022ರ ನವೆಂಬರ್ 6ರಂದು ಆಕಾಶ್ ಮೊದಲ ಪತ್ನಿ ನವ್ಯಶ್ರೀ ಮದುವೆಯಾದ ಐದು ತಿಂಗಳಲ್ಲೇ ಇದೇ ಮನೆಯಲ್ಲಿ ಬದುಕು ಅಂತ್ಯಗೊಳಿಸಿದ್ದರು.
• ಇದೀಗ ತಾಯಿ–ಮಗ ಸೇರಿ ಇನ್ನಿಬ್ಬರು ದುರಂತ ಅಂತ್ಯ ಕಂಡಿದ್ದಾರೆ.

ಘಟನೆಯ ಹಿನ್ನೆಲೆ, ಕುಟುಂಬದ ಒಳಗಣ ಒತ್ತಡಗಳು, ಹಣಕಾಸು ಜಗಳ ಮೊದಲಾದವುಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!