ಪುತ್ತೂರು :ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆ ಎಸ್ ಎಲ್ ವಿ ಬುಕ್ ಹೌಸ್ ಕಳೆದ ತಿಂಗಳು ಪುತ್ತೂರಿನ ನೆಹರೂ ನಗರದಲ್ಲಿ ಶುಭಾರಂಭಗೊಂಡಿತ್ತು. ಪುತ್ತೂರಿನ ಜನರ ಬೇಡಿಕೆಯ ಮೇರೆಗೆ ಪುತ್ತೂರಿನಲ್ಲಿ ಪುಸ್ತಕ ಮತ್ತು ಸ್ಟೇಷನರಿ ಮತ್ತು ಗಿಫ್ಟ್ ಐಟಂಗಳನ್ನೂಳಗೊಂಡ ಮಳಿಗೆ ಪ್ರಾರಂಭಗೊಂಡು ಪುತ್ತೂರಿನ ಜನರ ಸಂತಸಕ್ಕೆ ಕಾರಣವಾಗಿದೆ.

ನೂತನ ಮಳಿಗೆಗೆ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು, ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಭೇಟಿ ನೀಡಿ ಸಂಸ್ಥೆಗೆ ಶುಭ ಹಾರೈಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಗುಣರಂಜನ್ ಶೆಟ್ಟಿಯವರು ಪುತ್ತೂರಿನಲ್ಲಿ ಇಂತಹ ಒಂದು ಮಳಿಗೆ ವಿದ್ಯಾರ್ಥಿಗಳಿಗೆ ಅವಶ್ಯಕವಿದ್ದು, ಕ್ರೀಡಾ ಸಾಮಗ್ರಿಗಳು ದೊರೆಯುತ್ತಿರುವುದು ಹೆಮ್ಮೆಯ ವಿಚಾರ. ಮಂಗಳೂರು- ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂತಹ ಮಳಿಗೆಗಳು  ತೆರೆದಿದ್ದು, ಜನರಿಗೆ ತುಂಬಾ ಅನುಕೂಲವಾಗಿದೆ. ಬೆಳೆಯುತ್ತಿರುವ ಪುತ್ತೂರಿನಂತಹ ಪ್ರದೇಶದಲ್ಲಿ  ಇಂತಹ ಮಳಿಗೆ ತೆರೆದಿದ್ದು ತುಂಬಾ ಸಂತೋಷ ತಂದಿದೆ.  ಈ ಮಳಿಗೆ ಇನ್ನಷ್ಟು ವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ಎಸ್ ಎಲ್ ವಿ ಸಂಸ್ಥೆಯ ಮಾಲಕರಾದ ದಿವಾಕರ್ ದಾಸ್ ರವರು ಗುಣರಂಜನ್ ಶೆಟ್ಟಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ದ.ಕ ಜಿಲ್ಲಾ ಉಪಾಧ್ಯಕ್ಷರಾದ ರಾಮ್ ದಾಸ್ ಶೆಟ್ಟಿ, ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷರಾದ ರಾಮಚಂದ್ರ, ಕರ್ನಾಟಕ ಕುಸ್ತಿ ಸಂಘದ ದ ಕ ಜಿಲ್ಲಾ ಉಸ್ತುವಾರಿ ಸುಜಿತ್ ರೈ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರತೀಕ್ ಶೆಟ್ಟಿ, ಸಮರ್ಥ್ ಭಂಡಾರಿ, ತಿಲಕ್ ರಾಜ್ ಶೆಟ್ಟಿ, ರಾಜೇಶ್ ಬೆಂಗಳೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!