ಸಾಲ್ಮರ: ಅಬ್ದುಲ್ ಸಲಾಂ ತಂಙಳ್ ಅವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಸಾಲ್ಮರ ಸಯ್ಯದ್ ಮಲೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಈ ಬಾರಿ ಡಿ.31ರಿಂದ ಜ.4ರವರೆಗೆ ಭಕ್ತಿಭಾವ ಹಾಗೂ ವೈಭವದಿಂದ ನಡೆಯುತ್ತಿದೆ.
ಉರೂಸ್ ಪ್ರಯುಕ್ತ ಇಂದು (ಜ.02) ರಾತ್ರಿ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಅಧ್ಯಕ್ಷರು ಹಾಗೂ ಅಖಿಲ ಭಾರತ ಮುಸ್ಲಿಂ ಸಮುದಾಯದ ಅಗ್ರಗಣ್ಯ ನಾಯಕ ಶೈಖುನಾ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಸಿಂಸಾರುಲ್ ಹಕ್ ಹುದವಿ ನೀಡಲಿದ್ದು, ದುಆ ಆಶೀರ್ವಚನವನ್ನು ಸಯ್ಯದ್ ಮುಕ್ತರ್ ತಂಙಳ್ ಕುಂಭೋಳ್ ಸಲ್ಲಿಸಲಿದ್ದಾರೆ.
ರಾತ್ರಿ 7 ಗಂಟೆಗೆ ಸರಿಯಾಗಿ ಸಾಲ್ಮರ ಸಯ್ಯದ್ ಮಲೆ ಮಸೀದಿಯಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅನೇಕ ಸಾದಾತ್‌ಗಳು, ಉಲಮಾಗಳು, ಉಮರಾಗಳು ಹಾಗೂ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಉರೂಸ್ ಸಮಾರಂಭಕ್ಕೆ ಆಗಮಿಸುವ ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ಸಲ್ಲಿಸುತ್ತಿರುವುದಾಗಿ ಸಾಲ್ಮರ ಸಯ್ಯದ್ ಮಲೆ ಜಮಾಅತ್ ಕಮಿಟಿ ಅಧ್ಯಕ್ಷರು ಹಾಗೂ ಅಲ್ ರಹ್ಮಾ ಮಸೀದಿ ಮತ್ತು ಇರ್ಫಾನಿಯಾ ಮದ್ರಸ ಸಮಿತಿ ಅಧ್ಯಕ್ಷರಾದ ಸಂಶುದ್ದೀನ್ ಸಾಲ್ಮರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!