ಪುತ್ತೂರು, ಮಾರ್ಚ್ 21: ಆರಂಭಿಕ ಶಿಕ್ಷಣ ಕ್ಷೇತ್ರದಲ್ಲಿ ದೇಶದ ಪ್ರಮುಖ ಸಂಸ್ಥೆಯಾದ ‘ಯೂರೋಕಿಡ್ಸ್’ (EuroKids) PRESCHOOL ಪುತ್ತೂರಿನ ದರ್ಬೆ (ವಿಶಾಲಾ ಮಾರ್ಟ್ ಎದುರು)ಯಲ್ಲಿ ಮಾ. 21ರಂದು ಶನಿವಾರ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ನೂತನ ಸಂಸ್ಥೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕೃಷಿಕ ಸುಧಾಮ ಕಕ್ಕಾಜೆ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ತರಗತಿ ಕೊಠಡಿಗಳನ್ನು ಶ್ರೀ ರಾಮಕೃಷ್ಣ ಶಾಲೆಯ Correspondent ಹಾಗೂ ಶಿಕ್ಷಣ ತಜ್ಞ ಹೇಮನಾಥ ಶೆಟ್ಟಿ ಕಾವು ಉದ್ಘಾಟಿಸಲಿದ್ದಾರೆ.
ಸಹಾಯಕ ಆಯುಕ್ತೆ ಹಾಗೂ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ (ಕೆಎಎಸ್), ವಕೀಲ ಮಹೇಶ್ ಕಜೆ, ಫಾರೂಕ್ ಬಾಯಬೆ, ಸಚಿನ್ ಟ್ರೇಡಿಂಗ್ ಅಂಡ್ ಕೋ. ಮಾಲೀಕ ಮಂಜುನಾಥ ನಾಯಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಯೂರೋಕಿಡ್ಸ್ ಸಂಸ್ಥೆ ದೇಶ–ವಿದೇಶಗಳಲ್ಲಿ 1,700ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, 7 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿದೆ. ಮೂರು ದೇಶಗಳ 500ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ 70ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇಲ್ಲಿ ‘ವಿಸಿಬಲ್ ಥಿಂಕಿಂಗ್’ (Harvard Project Zero ಆಧಾರಿತ) ಹಾಗೂ ‘ಹುರೇಕಾ’ ಕಲಿಕೆ ವಿಧಾನಗಳ ಮೂಲಕ ಮಕ್ಕಳಲ್ಲಿ ಆಳವಾದ ಚಿಂತನೆ, ಸಮಸ್ಯೆ ಪರಿಹಾರ ಕೌಶಲ ಮತ್ತು ಆತ್ಮವಿಶ್ವಾಸ ಬೆಳೆಸಲು ಒತ್ತು ನೀಡಲಾಗುತ್ತದೆ. ಬೌದ್ಧಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸುರಕ್ಷಿತ ತರಗತಿಗಳು, ವಿಷಕಾರಿಯಲ್ಲದ ಉಪಕರಣಗಳು, ತರಬೇತಿ ಪಡೆದ ಶಿಕ್ಷಕರು ಹಾಗೂ ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ.
ಪೋಷಕರು ಹಾಗೂ ಸಾರ್ವಜನಿಕರು ಶಾಲೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!