ಪುತ್ತೂರು: ಬೊಳುವಾರು ಪುತ್ತೂರಿನ ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಯ ಎಲೈಡ್ ಹೆಲ್ತ್ ಸೈನ್ಸ್ ವಿಭಾಗದ ಮೂರನೇ ವರ್ಷದ ಎಮರ್ಜನ್ಸಿ ಮತ್ತು ಟ್ರೊಮಾ ಕೇರ್ ಕೋರ್ಸ್‌ನ ವಿದ್ಯಾರ್ಥಿಗಳು ಚೆನ್ನೈನ ಪ್ರಸಿದ್ಧ ಎಸ್.ಆರ್.எಂ. ಕಾಲೇಜಿನಲ್ಲಿ ನಡೆದ ‘ಪಾರಾಕಾನ್ 4.0’ ಎಂಬ ಎರಡು ದಿನಗಳ ಕಾರ್ಯಾಗಾರ ಹಾಗೂ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಮಾಣಪತ್ರ ಪಡೆದಿದ್ದಾರೆ.
ಸಮ್ಮೇಳನದಲ್ಲಿ ತುರ್ತು ವೈದ್ಯಕೀಯ ಸೇವೆ, ಟ್ರೊಮಾ ನಿರ್ವಹಣೆ ಹಾಗೂ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ತಜ್ಞರಿಂದ ಉಪನ್ಯಾಸ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಯಿತು ಎಂದು ತಿಳಿದುಬಂದಿದೆ.
ಪ್ರಾಂಶುಪಾಲರಾದ ಶ್ರೀಮತಿ ಮಾನಸ ಹಾಗೂ ಉಪನ್ಯಾಸಕರಾದ ರೇಷ್ಮಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅಜಿತ್ ಎಂ. ಬಾಶಿತ್, ಚೈತ್ರ, ವೈಶಾಲಿನಿ, ಪಾವನ, ಪ್ರಣಮ್ಯ, ಸಂದೀಪ್ ಕುಮಾರ್, ಸುಪ್ರಿತಾ ಹಾಗೂ ವಿನಯ ಭಾಗವಹಿಸಿದ ವಿದ್ಯಾರ್ಥಿಗಳಾಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!