ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೆಡ್‌ನಲ್ಲಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ. ನಝೀರ್ ಅಹಮದ್ ಅವರ ಡಾ. ನಝೀರ್ಸ್ ಡಯಾಬಿಟಿಸ್ ಸೆಂಟರ್‌ನಲ್ಲಿ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ಆ. 11ರಂದು ಉಚಿತ ಆರೋಗ್ಯ ತಪಾಸಣಾ ಹಾಗೂ ಜಾಗೃತಿ ಶಿಬಿರ ನಡೆಯಿತು.ಶಿಬಿರದಲ್ಲಿ ಸಾರ್ವಜನಿಕರಿಗೆ ಥೈರಾಯ್ಡ್ ಫಂಕ್ಷನ್ ಟೆಸ್ಟ್, ರಕ್ತದಲ್ಲಿನ ಸಕ್ಕರೆ ಪರೀಕ್ಷೆ (RBS), HbA1c, ಲಿಪಿಡ್ ಪ್ರೊಫೈಲ್, ವಿಟಮಿನ್ ಡಿ, BMI ಹಾಗೂ ದೇಹದ ಕೊಬ್ಬು ಮತ್ತು ಸ್ನಾಯುಗಳ ವಿಶ್ಲೇಷಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್ ಮಾತನಾಡಿ, ಆರೋಗ್ಯ ತಪಾಸಣೆಯ ಮೂಲಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಜೀವನಶೈಲಿ ಬದಲಾವಣೆ ಹಾಗೂ ವೈದ್ಯಕೀಯ ಮಾರ್ಗದರ್ಶನದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು ಎಂದರು.291 ಫಲಾನುಭವಿಗಳ ತಪಾಸಣೆಶಿಬಿರದಲ್ಲಿ ಒಟ್ಟು 291 ಮಂದಿಯ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಥೈರಾಯ್ಡ್ ಫಂಕ್ಷನ್ ಟೆಸ್ಟ್ 49, RBS 50, HbA1c 39, ಲಿಪಿಡ್ ಪ್ರೊಫೈಲ್ 31, ವಿಟಮಿನ್ ಡಿ 50 ಹಾಗೂ ದೇಹದ ಕೊಬ್ಬು ಮತ್ತು ಸ್ನಾಯುಗಳ ವಿಶ್ಲೇಷಣೆ 30 ತಪಾಸಣೆಗಳನ್ನು ನಡೆಸಲಾಯಿತು.ದೇಹದ ತೂಕ ಹಾಗೂ BMI ಜೊತೆಗೆ ದೇಹದಲ್ಲಿನ ಕೊಬ್ಬು ಮತ್ತು ಸ್ನಾಯುಗಳ ಪ್ರಮಾಣವನ್ನು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ದೇಹದಲ್ಲಿ ಹೆಚ್ಚಿರುವ ಕೊಬ್ಬು, ವಿಶೇಷವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಗುರುತಿಸುವುದರಿಂದ ಮಧುಮೇಹ ಹಾಗೂ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಅಂದಾಜಿಸಲು ಸಾಧ್ಯವಾಗುತ್ತದೆ. ಇದರಿಂದ ಸೂಕ್ತ ಆಹಾರ ಮತ್ತು ವ್ಯಾಯಾಮದ ಸಲಹೆ ನೀಡಲು ಸಹಕಾರಿಯಾಗುತ್ತದೆ ಎಂದು ಡಾ. ನಝೀರ್ ಅಹಮದ್ ತಿಳಿಸಿದರು.ವಿಟಮಿನ್ ಡಿ ಮೂಳೆಗಳ ಆರೋಗ್ಯ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಹಾಗೂ ಸ್ನಾಯುಗಳ ಕಾರ್ಯನಿರ್ವಹಣೆಗೆ ಪ್ರಮುಖವಾಗಿದೆ. ವಿಟಮಿನ್ ಡಿ ಕೊರತೆಯನ್ನು ಆರಂಭಿಕ ಹಂತದಲ್ಲೇ ಗುರುತಿಸುವುದರಿಂದ ಮೂಳೆಗಳ ದುರ್ಬಲತೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್, ಪೂರ್ವಾಧ್ಯಕ್ಷ ಎ.ಜೆ. ರೈ, ನಿಯೋಜಿತ ಅಧ್ಯಕ್ಷ ಸುದರ್ಶನ್ ರಾವ್, ಕಾರ್ಯದರ್ಶಿ ಲೋವಲ್ ಮೇವಾಡ, ಸದಸ್ಯ ವಿಶ್ವನಾಥ್ ಗೌಡ, ರೋಟರ್ಯಾಕ್ಟ್ ಜಿಲ್ಲಾ ಕೌನ್ಸಿಲ್ ಸದಸ್ಯ ಸುಬ್ರಮಣಿ ಪಿ.ವಿ., ರೋಟರ್ಯಾಕ್ಟ್ ಪುತ್ತೂರು ಅಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.ಎರಿಸ್ ಕಂಪೆನಿಯ ವಿಶ್ಲೇಶ್ ಹಾಗೂ ರಾಜೇಶ್, ಇಂಟಾಸ್ ಕಂಪೆನಿಯ ಚರಣ್ ಹಾಗೂ ರಕ್ಷಿತ್, ಮ್ಯಾನ್‌ಕೈಂಡ್ ಕಂಪೆನಿಯ ತೌಸಿಫ್, ಮೆಕ್ಸಾಯಿಡ್ಸ್ ಕಂಪೆನಿಯ ಭರತ್ ಹಾಗೂ ವರುಣ್ ಕುಮಾರ್, ಹೈರೋಕೇರ್, ಅಗಿಲಾಸ್ ಲ್ಯಾಬ್ ಸಿಬ್ಬಂದಿ ಹಾಗೂ ಡಾ. ನಝೀರ್ ಅಹಮದ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!