ಪುತ್ತೂರು: ಮುಳಿಯ ಫೌಂಡೇಶನ್ ಹಾಗೂ ಮುಳಿಯ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಬೆಂಗಳೂರಿನ 81ಕ್ಕೂ ಹೆಚ್ಚು ಶಾಲೆಗಳಲ್ಲಿ ಆಯೋಜಿಸಲಾಗುತ್ತಿರುವ ‘ಧನಾತ್ಮಕ ಪೋಷಕತ್ವ’ ವಿಚಾರಸಂಕಿರಣ ಸರಣಿಯ ಉದ್ಘಾಟನಾ ಕಾರ್ಯಕ್ರಮ ಆ.13ರಂದು ಆನ್‌ಲೈನ್ ಮೂಲಕ ನಡೆಯಲಿದೆ.ಪೋಷಕರು ಹಾಗೂ ಮಕ್ಕಳನ್ನು ತಲುಪುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ನಟ, ಚಿಂತಕ ಹಾಗೂ ಪ್ರೇರಣಾದಾಯಕ ಮಾತುಗಾರ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ. ಮಕ್ಕಳ ಬೆಳವಣಿಗೆ, ಪೋಷಕರ ಜವಾಬ್ದಾರಿ ಹಾಗೂ ಮಕ್ಕಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸುವ ಕುರಿತು ಅವರು ಉಪಯುಕ್ತ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.ಆ.13ರಂದು ಗುರುವಾರ ಸಂಜೆ 6.15ಕ್ಕೆ ಲಾಗಿನ್ ಆರಂಭವಾಗಲಿದ್ದು, ಸಂಜೆ 6.30ರಿಂದ 7.30ರವರೆಗೆ ಕಾರ್ಯಕ್ರಮ ನಡೆಯಲಿದೆ. Zoom ಮೂಲಕ ಸಂಪೂರ್ಣ ಆನ್‌ಲೈನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು.ನೋಂದಣಿಗೆ: https://us06web.zoom.us/meeting/register/9zA1g1FaT2mZ_JB1DzfCggಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್‌ನ ಅಧಿಕೃತ YouTube ಚಾನೆಲ್‌ನಲ್ಲಿಯೂ ನೇರವಾಗಿ ವೀಕ್ಷಿಸಬಹುದಾಗಿದೆ. ಯಾವುದೇ ಮಾಹಿತಿ ಅಥವಾ ಪ್ರಶ್ನೆಗಳಿದ್ದಲ್ಲಿ ಹೆಸರು ಹಾಗೂ ಅಗತ್ಯ ಮಾಹಿತಿಯೊಂದಿಗೆ 8123643916ಕ್ಕೆ WhatsApp ಮೂಲಕ ಸಂಪರ್ಕಿಸಬಹುದು.ಪೋಷಕರಲ್ಲಿ ಮಕ್ಕಳೊಂದಿಗೆ ಉತ್ತಮ ಸಂವಹನ, ಅರ್ಥಪೂರ್ಣ ಸಂಬಂಧ ಹಾಗೂ ಸಕಾರಾತ್ಮಕ ಪೋಷಕತ್ವದ ಮನೋಭಾವ ಬೆಳೆಸುವ ಉದ್ದೇಶದಿಂದ ಈ ವಿಚಾರಸಂಕಿರಣ ಸರಣಿಯನ್ನು ಆಯೋಜಿಸಲಾಗಿದೆ ಎಂದು ಕೇಶವ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










