ಮಂಗಳೂರು, ಮಾ.19: ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಗುರುವಾರ ಮುಸ್ಸಂಜೆ ಕಂಡುಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ ಹಬ್ಬವನ್ನು ಆಚರಿಸಲು ಕರೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಈ ಕುರಿತು ಘೋಷಣೆ ಮಾಡಿದ್ದು, ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ಈದ್ ನಮಾಜ್ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಮಾಹಿತಿ ಮಸ್ಜಿದ್ ಝೀನತ್ ಭರ್ ಕೋಶಾಧಿಕಾರಿ ಎಸ್‌.ಎಂ. ರಶೀದ್ ಹಾಜಿ ಪ್ರಕಟಣೆಯಲ್ಲಿ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!