ಉಪ್ಪಿನಂಗಡಿ, ಮಾ.25: ಇಲ್ಲಿನ ಬಾಳಿಯೂರು ವಸತಿ ಸಂಕೀರ್ಣದ ನಿವಾಸಿ ಸಿದ್ದೀಕ್ ಟೈಲರ್ ಅವರ ಪುತ್ರಿ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಯು. ಮುಶೀರಾ ಬಾನು (18) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಕಳೆದ ಐದು ದಿನಗಳಿಂದ ಅಸೌಖ್ಯದಿಂದಾಗಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಮುಶೀರಾ ಬಾನು ಉಪ್ಪಿನಂಗಡಿ ಜ್ಞಾನಭಾರತಿ ಆಂಗ್ಲಮಾಧ್ಯಮ ಶಾಲೆಯ ಹಳೆಯ ವಿದ್ಯಾರ್ಥಿನಿ. ಅವರ ನಿಧನ ಸುದ್ದಿ ಬಂಧುಬಳಗ ಹಾಗೂ ಸ್ನೇಹಿತವರ್ಗದಲ್ಲಿ ದುಃಖದ ವಾತಾವರಣ ಮೂಡಿಸಿದೆ.
ಮೃತರು ತಂದೆ, ತಾಯಿ, ಮೂವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.














