ಪುತ್ತೂರು, ಏಪ್ರಿಲ್ 25: ನೆರಿಮೊಗರು ನಿವಾಸಿ, ಕೃಷಿಕ ಹಾಗೂ ಶಿವಗಂಗಾ ಕನ್ಸಕ್ಷನ್ ಸಂಸ್ಥೆಯ ಮಾಲಕ ಗಂಗಾಧರ ಸುವರ್ಣ (66) ಅವರು ಏಪ್ರಿಲ್ 24ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ದಿ. ಕಮಲಾಕ್ಷಿ ಮತ್ತು ಮಾಯಿಲಪ್ಪ ಸುವರ್ಣರವರ ಪುತ್ರರಾಗಿದ್ದು, ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ದರ್ಬೆಯ ಹಿತ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಶರ್ಮಿಳಾ, ಪುತ್ರ ಕೌಶಿಕ್, ಪುತ್ರಿ ಕೀರ್ತನಾ, ಸಹೋದರ ವೇದನಾಥ ಸುವರ್ಣ ಹಾಗೂ ಸಹೋದರಿಯರನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!