ಪುತ್ತೂರು: ಮುಕ್ವೆ ನಿವಾಸಿ ದಾಮೋದರ ಆಚಾರ್ಯ (74) ಅವರು ಇಂದು(ಮಾ. 24) ಮುಂಜಾನೆ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ   ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದರ್ಬೆ ಹಾಗೂ ಕೆಮ್ಮಿಂಜೆ ಪ್ರದೇಶಗಳಲ್ಲಿ ಫರ್ನಿಚರ್ ಅಂಗಡಿಗಳನ್ನು ನಡೆಸುತ್ತಿದ್ದ ಅವರು ವ್ಯಾಪಾರ ವಲಯದಲ್ಲಿ ಪರಿಚಿತರಾಗಿದ್ದರು. ಮುಕೈಯಲ್ಲಿ ವಾಸವಾಗಿದ್ದರು.
ಮೃತರು ಪತ್ನಿ ಲೀಲಾವತಿ, ಪುತ್ರರಾದ ಪ್ರಶಾಂತ್, ಪ್ರವೀಣ್, ಪ್ರದೀಪ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!