ಬೆಳ್ತಂಗಡಿ, ಮಾ.27: ತಾಲೂಕಿನ ಕಳೆಂಜ ಮುರದಮೇಲು ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಆಧರಿಸಿ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಪ್ರಶಾಂತ್, ಶಶಿಕುಮಾರ್, ಹೊನ್ನಪ್ಪ ಗೌಡ ಹಾಗೂ ಜನಾರ್ಧನ ಎಂದು ಗುರುತಿಸಲಾಗಿದೆ.
ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ನಗದು ರೂ. 2,250, ಕೋಳಿ ಅಂಕಕ್ಕೆ ಬಳಸುವ ಬಾಳು (ಸಣ್ಣ ಕತ್ತಿ), 14 ಅಂಕದ ಕೋಳಿಗಳು ಸೇರಿದಂತೆ ಇತರೆ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 22/2026ರಂತೆ ಭಾರತೀಯ ನ್ಯಾಯ ಸಂಹಿತೆ ಕಲಂ 112, ಕೆ.ಪಿ. ಕಾಯ್ದೆ 87 ರೊಂದಿಗೆ 11(1)(m)(ii), 11(1)(n) ಹಾಗೂ ಪ್ರಿವೆನ್ಷನ್ ಆಫ್ ಅನಿಮಲ್ಸ್ ಕ್ರುವೆಲ್ಟಿ ಆಕ್ಟ್-1960 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.














