ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ‘ಜನ್ಮ ಕ್ರಿಯೇಷನ್ಸ್, ಪುತ್ತೂರು’ ಅರ್ಪಿಸುವ ‘ಪುತ್ತೂರ ಲಿಂಗನಾಥ’ ತುಳು ಭಕ್ತಿ ಪ್ರಧಾನ ವಿಡಿಯೋ ಆಲ್ಬಂ ಸಾಂಗ್ ಏಪ್ರಿಲ್ 16ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬಿಡುಗಡೆಗೊಳ್ಳಲಿದೆ.
ಇಂಡಿಯಾ ಬುಕ್ ಆಫ್ ರೆಕಾಡ್ಸ್ ಮಾನ್ಯತೆ ಪಡೆದ ಜನ್ಮ ಕ್ರಿಯೇಷನ್ಸ್ ಸಂಸ್ಥೆಯ ಡಾ. ಹರ್ಷ ಕುಮಾರ್ ರೈ ಮಾಡಾವು ಅವರ ನಿರ್ಮಾಣದಲ್ಲಿ, ಚಾರ್ವಿ ಆಡಿಯೋಸ್‌ರವರ ಚೊಚ್ಚಲ ಕಾಣಿಕೆಯಾಗಿರುವ ಈ ಹಾಡಿಗೆ ಪತ್ರಕರ್ತ ಸಿಶೇ ಕಜೆಮಾರ್ ಸಾಹಿತ್ಯ ಮತ್ತು ನಿರ್ದೇಶನ ನೀಡಿದ್ದಾರೆ. ಚಲನಚಿತ್ರ ಹಿನ್ನೆಲೆ ಗಾಯಕ ಮಿಥುನ್ ರಾಜ್ ವಿದ್ಯಾಪುರ ಧ್ವನಿ ನೀಡಿದ್ದಾರೆ. ಕಬಕದ ಶ್ರೀರಾಜ್ ಮ್ಯೂಸಿಕ್ ವರ್ಲ್ಡ್‌ನಲ್ಲಿ ಧ್ವನಿಮುದ್ರಣ ಹಾಗೂ ಮಾಸ್ಟರಿಂಗ್ ನಡೆದಿದ್ದು, ಬಂಟ್ವಾಳದ ಎಸ್.ಕೆ ಸ್ಟುಡಿಯೋದಲ್ಲಿ ಎಡಿಟಿಂಗ್ ಕಾರ್ಯ ನಡೆದಿದೆ. ಮಮತಾ ಕಜೆಮಾರ್, ಎಪಿಪಿ ಜನಾರ್ದನ್ ಬಿ. ಪುತ್ತೂರು ಸಹಕಾರ ನೀಡಿದ್ದಾರೆ. ಅಶ್ವಿನಿ ಕುಮಾರ್ ಪುತ್ತೂರು ಪೋಸ್ಟರ್ ವಿನ್ಯಾಸಗೊಳಿಸಿದ್ದಾರೆ.
ವಿಡಿಯೋ ಆಲ್ಬಂ ‘ಪುತ್ತೂರು ಸುದ್ದಿ’ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಜನ್ಮ ಕ್ರಿಯೇಷನ್ಸ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ದೇಶಭಕ್ತಿ, ಧಾರ್ಮಿಕ ಮತ್ತು ಸಾಮಾಜಿಕ ಸಂದೇಶವಿರುವ ಕಿರುಚಿತ್ರಗಳು ಹಾಗೂ ಆಲ್ಬಂಗಳನ್ನು ನಿರ್ಮಿಸಿ ದೇಶ–ವಿದೇಶಗಳಲ್ಲಿ ಬಿಡುಗಡೆಗೊಳಿಸಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ಸ್ ದಾಖಲೆ ಮಾಡಿರುವ ಸಂಸ್ಥೆಗೆ ಜಾಗತಿಕ ಹಿಂದೂ ಫೌಂಡೇಶನ್ ಪ್ರಶಂಸೆ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!