ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಪದ ಬಳಕೆ ಹಾಗೂ ಪೋಸ್ಟ್ ಪ್ರಕರಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಚೇತನ್ ಗೌಡ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ನಲ್ಲಿ ರಾಜೇಶ್ ಎಂಬಾತನ ಹೆಸರನ್ನೂ ಉಲ್ಲೇಖಿಸಲಾಗಿದೆ.
ನಿರ್ಮಲನಂದನಾಥ ಸ್ವಾಮಿಜಿ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿ ತೇಜೋವಧೆ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ವಿದೇಶ ಪ್ರವಾಸದ ಫೋಟೋ ಬಳಕೆ ಮಾಡಿ ಅವಹೇಲನಕಾರಿ ಪದ ಬಳಕೆ ಮಾಡಿ ಚೇತನ್ ಗೌಡ ಎಂಬಾತ ಪೋಸ್ಟ್ ಮಾಡಿದ್ದ. ಇದಕ್ಕೆ ರಾಜೇಶ್ ಎಂಬಾತ ಶ್ರೀಗಳ ವಿರುದ್ಧ ಕೆಟ್ಟ ಕಮೆಂಟ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.














