ಪುತ್ತೂರು: ವಜ್ರಮಾತಾ ಮಹಿಳಾ ಘಟಕ ಪುತ್ತೂರು ಹಾಗೂ ಅಸಹಾಯಕರ ಸೇವಾ ಟ್ರಸ್ಟ್(ರಿ) ಪುತ್ತೂರು ವತಿಯಿಂದ, ರೋಟರಾಕ್ಟ್ ಕ್ಲಬ್ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ನೆಲ್ಲಿಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಜೂ. 10 ರಂದು ನಡೆಯಿತು.
ಕಾರ್ಯಕ್ರಮವನ್ನು ವಜ್ರಮಾತಾ ಮಹಿಳಾ ಘಟಕ ಮತ್ತು ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಹಾಗೂ ಪ್ರಗತಿ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ ಗಿಡ ನೆಟ್ಟು ಉದ್ಘಾಟಿಸಿದರು. ಬಳಿಕ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ, ವನಮಹೋತ್ಸವದ ಮಹತ್ವದ ಕುರಿತು ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಜ್ರಮಾತಾ ಮಹಿಳಾ ಘಟಕದ ಉಪಾಧ್ಯಕ್ಷೆ ಯಮುನಾ, ಕಾರ್ಯದರ್ಶಿ ವಿದ್ಯಾ ಲಿಂಗಪ್ಪ, ಕೋಶಾಧಿಕಾರಿ ಕವಿತಾ ದಿನಕರ, ವತ್ಸಲಾ ಶೆಟ್ಟಿ, ಪ್ರಫುಲ್ಲ, ಪುಷ್ಪ, ಅಶೋಕ್ ಕುಮಾರ್ ರೈ, ಲಿಂಗಪ್ಪ ಗೌಡ, ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷ ರಂಜಿತ್, ಝೆಡ್‌ಆರ್‌ಎಸ್ ಕವಿತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಸಹಶಿಕ್ಷಕರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!