ಉಪ್ಪಿನಂಗಡಿ: ಸ್ನೇಹದ ನೆಪದಲ್ಲಿ ಬೈಕ್ ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಕಳವುಗೊಂಡ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಶ್ಯಾಮ್ ಜಿ. ಕೃಷ್ಣನ್ (31) ಎಂದು ಗುರುತಿಸಲಾಗಿದೆ. ಈತ ಉಪ್ಪಿನಂಗಡಿಯ ರಾಜಧಾನಿ ಟವರ್ಸ್‌ನಲ್ಲಿರುವ ಶ್ರೀ ದೇವಿ ಸ್ಟಿಕ್ಕರ್ ಕಟಿಂಗ್ಸ್ ಸೆಂಟರ್ ಮಾಲಕ ಶೀನಪ್ಪ ಮುಗೇರ ಅವರ ಬೈಕ್ ಪಡೆದು ಪರಾರಿಯಾಗಿದ್ದನೆಂದು ಆರೋಪಿಸಲಾಗಿದೆ.
ಜೂನ್ 16ರಂದು ಆರೋಪಿ, “ಒಮ್ಮೆ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ” ಎಂದು ಹೇಳಿ ಶೀನಪ್ಪ ಅವರಿಂದ ಬೈಕ್ ಪಡೆದುಕೊಂಡು ತೆರಳಿದ್ದ. ಬಳಿಕ ಹಿಂದಿರುಗದೆ ನಾಪತ್ತೆಯಾಗಿದ್ದಾನೆ. ನಂತರ ಶೀನಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಮೊಬೈಲ್‌ ಫೋನ್‌ ಸ್ಥಳಾವಕಾಶವನ್ನು (ಲೊಕೇಶನ್) ಆಧರಿಸಿ ತನಿಖೆ ನಡೆಸಿದ ವೇಳೆ, ಆತ ಗಾಳಿಮುಖ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಯಿತು. ಮಂಗಳವಾರ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!