ಪುತ್ತೂರು: ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ಗ್ರಾಹಕರಿಗಾಗಿ ವಿಶೇಷ ‘ಮನ್ಸೂನ್ ಸೇಲ್’ ಆರಂಭಿಸಲಾಗಿದ್ದು, ಆಯ್ದ ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜ್ (ವ್ಯಾಲ್ಯೂ ಅಡಿಷನ್) ಮೇಲೆ ಶೇ.100 ರಿಯಾಯಿತಿ ಘೋಷಿಸಲಾಗಿದೆ.ಸಂಸ್ಥೆ ನೀಡಿದ ಪ್ರಕಟಣೆಯ ಪ್ರಕಾರ, ಆಯ್ದ ನೆಕ್ಲೆಸ್, ಹಾರ, ಮುತ್ತಿನ ಹಾರ, ಚೋಕರ್, ಬಂಗಲ್, ಬಳೆ, ಬ್ರೇಸ್ಲೆಟ್, ಉಂಗುರ, ಕಿವಿಯೋಲೆ, ಪೆಂಡೆಂಟ್, ಮಂಗಳಸೂತ್ರ ಹಾಗೂ ಮಕ್ಕಳ ಆಭರಣಗಳ ಖರೀದಿಗೆ ಮೇಕಿಂಗ್ ಚಾರ್ಜ್ ಇರುವುದಿಲ್ಲ. ಗ್ರಾಹಕರು ಅಂದಿನ ಚಿನ್ನದ ಬೆಲೆ ಹಾಗೂ ಶೇ.3 ಜಿಎಸ್‌ಟಿ ಮಾತ್ರ ಪಾವತಿಸಬೇಕಾಗುತ್ತದೆ.ಇದಲ್ಲದೆ, ಇನ್ನೂ ಹಲವು ಆಯ್ದ ಆಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.75 ಹಾಗೂ ಶೇ.50 ರಿಯಾಯಿತಿಯೂ ನೀಡಲಾಗುತ್ತಿದೆ. ಈ ಆಫರ್ ಜುಲೈ 13ರಿಂದ ಆಗಸ್ಟ್ 14ರವರೆಗೆ ಅಥವಾ ಸ್ಟಾಕ್ ಇರುವವರೆಗೆ ಮಾತ್ರ ಲಭ್ಯವಿರುತ್ತದೆ.ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಂಗಳೂರಿನ ಮಣಿಪಾಲ್ ಸೆಂಟರ್‌ನಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಮ್‌ಗಳಲ್ಲಿ ಈ ಆಫರ್ ಲಭ್ಯವಿದೆ. ರಿಯಾಯಿತಿಯು ಆಯ್ದ ಆಭರಣಗಳು ಹಾಗೂ ಆಯ್ದ ವಿನ್ಯಾಸಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.ಬಾಕ್ಸ್’ಗ್ರಾಹಕರ ನಿರೀಕ್ಷೆಗೆ ತಕ್ಕ ಆಫರ್'”ಆಟಿ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನದ ಬೆಲೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಈ ವಿಶೇಷ ಆಫರ್ ರೂಪಿಸಲಾಗಿದೆ. ಆರಂಭವಾದ ಮೊದಲ ಎರಡು ದಿನಗಳಲ್ಲೇ ಉತ್ತಮ ಸ್ಪಂದನೆ ದೊರೆತಿದೆ” ಎಂದು ಮುಳಿಯ ಗೋಲ್ಡ್ & ಡೈಮಂಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!