ಪುತ್ತೂರು: ಪುತ್ತೂರಿನ ಪ್ರಜ್ವಲ್‌ ಪುತ್ತೂರು ಅವರ ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್‌ ಸಂಸ್ಥೆಯು ಎಂಟು ವರ್ಷಗಳ ಯಶಸ್ವಿ ಸೇವೆ ಪೂರ್ಣಗೊಳಿಸಿ, ಜುಲೈ 16ರಂದು 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.ಸಂಸ್ಥೆಯು ಎಲ್‌ಇಡಿ ವಿಡಿಯೋ ವಾಲ್‌, ಟಿವಿ, ಪ್ರೊಜೆಕ್ಟರ್‌, ವಿಡಿಯೋಗ್ರಾಫಿ, ಮಾಧ್ಯಮಗಳ ನೇರಪ್ರಸಾರಕ್ಕೆ ಅಗತ್ಯವಿರುವ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್‌ ವಿಡಿಯೊ ಮಿಕ್ಸಿಂಗ್‌ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತಿದೆ.ಮದುವೆ, ಆರತಕ್ಷತೆ, ಮೆಹಂದಿ, ಸಂಗೀತ, ನೃತ್ಯ ಕಾರ್ಯಕ್ರಮ, ವಾರ್ಷಿಕೋತ್ಸವ, ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ವೇದಿಕೆಯ ದೃಶ್ಯಗಳನ್ನು ಸಭಾಂಗಣದ ಎಲ್ಲ ಭಾಗಗಳಿಗೂ ತಲುಪಿಸಲು ಎಲ್‌ಇಡಿ ವಿಡಿಯೋ ವಾಲ್‌ಗಳು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿವೆ. ಕಾರ್ಯಕ್ರಮಗಳ ಆಕರ್ಷಣೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ಈ ತಾಂತ್ರಿಕ ವ್ಯವಸ್ಥೆ ನೆರವಾಗುತ್ತಿದೆ.ಪುತ್ತೂರು ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪಿಕ್ಸೆಲ್ ಕ್ರಿಯೇಟಿವ್ಸ್‌ ವತಿಯಿಂದ ಎಲ್‌ಇಡಿ ವಿಡಿಯೋ ವಾಲ್‌ ಹಾಗೂ ಲೈವ್‌ ತಾಂತ್ರಿಕ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ.ಬಾಕ್ಸ್‌ | ಗುಣಮಟ್ಟದ ಎಲ್‌ಇಡಿ ವ್ಯವಸ್ಥೆ”ಕಾರ್ಯಕ್ರಮದ ಅಗತ್ಯಕ್ಕೆ ಅನುಗುಣವಾಗಿ ಇಂಡೋರ್‌ ಹಾಗೂ ಔಟ್‌ಡೋರ್‌ ಮಾದರಿಯ ಗುಣಮಟ್ಟದ ಎಲ್‌ಇಡಿ ವಿಡಿಯೋ ವಾಲ್‌ಗಳನ್ನು ಒದಗಿಸಲಾಗುತ್ತಿದೆ. ಗ್ರಾಹಕರಿಗೆ ಅತ್ಯುತ್ತಮ ತಾಂತ್ರಿಕ ಸೇವೆ ನೀಡುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ,” ಎಂದು ಸಂಸ್ಥೆಯ ಮಾಲೀಕ ಪ್ರಜ್ವಲ್‌ ಪುತ್ತೂರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!