ಪುತ್ತೂರು: ಜು. 23: ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜುವೆಲರ್ಸ್‌ನ ಪುತ್ತೂರು, ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ವಿಶೇಷ ಆಟಿ ಸೇಲ್ ಆರಂಭವಾಗಿದೆ.ಸೇಲ್‌ನಲ್ಲಿ ಚಿನ್ನದ ಆಭರಣಗಳ ವಿಎ (VA) ಶುಲ್ಕದ ಮೇಲೆ ಪ್ರತಿ ಗ್ರಾಂಗೆ ₹500 ವರೆಗೆ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ಫ್ಲ್ಯಾಟ್ ₹6,000 ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ₹7,000 ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈಗಾಗಲೇ ಖರೀದಿಸಿರುವ ಹಳೆಯ ಗೋ ಡೈಮಂಡ್ಸ್ ಆಭರಣಗಳಿಗೆ ಶೇ. 90 ಬೈಬ್ಯಾಕ್ ಸೌಲಭ್ಯವೂ ಲಭ್ಯವಿದ್ದು, ಹೊಸ ಗೋ ಡೈಮಂಡ್ಸ್ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.ಇದೇ ವೇಳೆ ಆಕರ್ಷಕ ಶೇ. 8 ವಿಎ ಶುಲ್ಕದಿಂದ ಆರಂಭವಾಗುವ ಹಳದಿ ಟ್ಯಾಗ್ ಆಭರಣಗಳ ಮೇಲೂ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ. ಗ್ರಾಹಕರಿಗಾಗಿ ನವೀನ ವಿನ್ಯಾಸದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ವಿಶಾಲ ಸಂಗ್ರಹವನ್ನು ವಿಶೇಷ ರಿಯಾಯಿತಿಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ತಕ್ಕ ಆಭರಣಗಳ ಜೊತೆಗೆ ಪ್ರಾಚಿ ವಿಭಾಗದಲ್ಲಿ ವಿನೂತನ ಆ್ಯಂಟಿಕ್ ಚಿನ್ನಾಭರಣಗಳು, ಲೈಟ್ ವೈಟ್ ಆ್ಯಂಟಿಕ್ ಕಲೆಕ್ಷನ್, 1,300ಕ್ಕೂ ಅಧಿಕ ಕರಿಮಣಿ ವಿನ್ಯಾಸಗಳು, 2,500ಕ್ಕೂ ಹೆಚ್ಚು ಸರಗಳ ಸಂಗ್ರಹ ಹಾಗೂ 3,000ಕ್ಕೂ ಅಧಿಕ ಹೊಸ ವಿನ್ಯಾಸದ ಗೋ ವಜ್ರಾಭರಣಗಳು ಗ್ರಾಹಕರ ಆಯ್ಕೆಗೆ ಲಭ್ಯವಿವೆ.ಪುರುಷರ ವಿಭಾಗದಲ್ಲಿ ಕರ್ಟಿಯರ್ ಕಡ, ಲೇಸರ್ ಕಟಿಂಗ್ ಕಡ, ಕ್ಯೂಬನ್ ಚೈನ್, ಇಂಡೋ-ಇಟಾಲಿಯನ್ ಚೈನ್, ನವರತ್ನ ಉಂಗುರಗಳು, ಆ್ಯಂಟಿಕ್ ಹಾಗೂ ಕಾಸ್ಟಿಂಗ್ ಪದಕಗಳು, ವಾಚ್ ಚೈನ್ ಸೇರಿದಂತೆ ಹಲವು ಹೊಸ ಮಾದರಿಯ ಆಭರಣಗಳ ಸಂಗ್ರಹವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ಆಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ಲೈಟ್ ವೈಟ್ ಚಿನ್ನಾಭರಣಗಳು, ಪೇಪರ್ ಕ್ಯಾಸ್ಟಿಂಗ್ ಹಾಗೂ ವಿವಿಧ ಬಣ್ಣಗಳ ವಿನೂತನ ವಿನ್ಯಾಸದ ಆಭರಣಗಳೂ ಲಭ್ಯವಿವೆ ಎಂದು ತಿಳಿಸಲಾಗಿದೆ.









