ಬಂಟ್ವಾಳ: ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಶಂಭೂರು ನಿವಾಸಿ ಜಯಂತ್‌ (55) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಾಳ್ತಿಲ ಗ್ರಾಮದ ನೀರಪಾದೆಯಲ್ಲಿ ಆ.9ರಂದು ರಾತ್ರಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಮದ್ಯ ಮಾರಾಟಕ್ಕೆ ಯಾವುದೇ ಪರವಾನಗಿ ಇಲ್ಲದೆ ವಿವಿಧ ಮಾದರಿಯ 103 ಮದ್ಯದ ಸ್ಯಾಚೆಟ್‌ಗಳನ್ನು (9.270 ಲೀಟರ್) ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.₹5,470 ಮೌಲ್ಯದ ಮದ್ಯ, ಮಾರಾಟದಿಂದ ಬಂದ ಹಣವೆಂದು ಹೇಳಲಾದ ₹300 ನಗದು ಹಾಗೂ KA-19-HF-0862 ನೋಂದಣಿ ಸಂಖ್ಯೆಯ ಬಜಾಜ್‌ ಪ್ಲಾಟಿನಾ ಬೈಕ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಟ್ವಾಳ ನಗರ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32, 34ರಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!