ಪುತ್ತೂರು: ಚೇತನಾ ಆಸ್ಪತ್ರೆ, ಪುತ್ತೂರು ವತಿಯಿಂದ ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಉಚಿತ TSH (Thyroid Stimulating Hormone) ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ.TSH ರಕ್ತ ಪರೀಕ್ಷೆಯ ಮೂಲಕ ಥೈರಾಯ್ಡ್ ಗ್ರಂಥಿ ಕಡಿಮೆ ಅಥವಾ ಹೆಚ್ಚು ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ದಣಿವು, ತೂಕದಲ್ಲಿ ಏರಿಳಿತ, ಕೂದಲು ಉದುರುವುದು, ಚಳಿ ಅಥವಾ ಬಿಸಿ ಹೆಚ್ಚು ಅನುಭವವಾಗುವುದು, ಹೃದಯ ಬಡಿತದಲ್ಲಿ ವ್ಯತ್ಯಾಸ ಮೊದಲಾದ ಲಕ್ಷಣಗಳಿರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.ಶಿಬಿರದ ದಿನಾಂಕ, ಸಮಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಚೇತನಾ ಆಸ್ಪತ್ರೆಯನ್ನು ಸಂಪರ್ಕಿಸಬಹುದು.










