ಮುಕ್ವೆ: ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವತಿಯಿಂದ ನಿರ್ಮಿಸಲಾಗಿರುವ RJM ಆಡಿಟೋರಿಯಂ ಉದ್ಘಾಟನಾ ಸಮಾರಂಭವು ಆ.30ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ನೆರವೇರಿಸಲಿದ್ದು, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಅಬ್ದುಲ್ಲಾ ಮುಸ್ಲಿಯಾರ್ ಕೊಡಗು ದುವಾ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು RJM ಅಧ್ಯಕ್ಷ ಎಂ.ಕೆ. ಖಾಸಿಂ ಹಾಜಿ ವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಅಸ್ಸಯ್ಯದ್ ಅಬೂಬಕ್ಕರ್ ಅನ್ವರ್ ತಂಙಳ್ ಮಂಗಳೂರು, RJM ಮುಕ್ವೆಯ ಖತೀಬ್ ಇರ್ಷಾದ್ ಫೈಝಿ ಪಾಲ್ತಾಡ್, ಎಲ್.ಟಿ. ರಜಾಕ್ ಹಾಜಿ, ಡಾ. ಶಂಶುದ್ದೀನ್ ಸಾಲ್ಮರ, ನಿಸಾರ್ ಮೇಗಿನಪೇಟೆ, ಅಬ್ದುಲ್ ಹಮೀದ್ ಕುತ್ತಮುಟ್ಟೆ, ಹಾಜಿ ಅಬ್ದುಲ್ ಲತೀಫ್ ಹರ್ಲಡ್ಕ, ಉಮ್ಮರ್ ಹಾಜಿ ಬನ್ನೂರು ಹಾಗೂ ಇಬ್ರಾಹಿಂ ಅಜ್ಜಿಕ್ಕಲ್ಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಹುಸೈನ್ ಕೊಡಿಯಾಡಿ, ಬಷೀರ್ ಹಾಜಿ ಕೊಡಿಯಾಡಿ, ಹಸೈನಾರ್ ಹಾಜಿ ಸಿಟಿ ಬಜಾರ್, ಕೆ.ಎಂ. ಹಂಝ ಸಾಲ್ಮರ, ಉಮ್ಮರ್ ಹಾಜಿ ಕೊಡಿಯಾಡಿ, ಕಲಂದರ್ ಅಝರ್ ಹಾಗೂ ಆಸೀಫ್ ರೆಂಜಲಾಡಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ ಹಾಗೂ ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!