ಸವಣೂರು: ಸವಣೂರಿನ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಅಧಿಕೃತ ಬಹುಬ್ರಾಂಡ್ ದ್ವಿಚಕ್ರ ವಾಹನಗಳ ಸಂಸ್ಥೆ ‘ಶ್ವೇತಾ ಮೋಟರ್ಸ್’ ಆ.28ರಂದು ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ.ಸಂಸ್ಥೆಯಲ್ಲಿ ಟಿವಿಎಸ್, ಹೋಂಡಾ, ಬಜಾಜ್, ಸುಜುಕಿ ಹಾಗೂ ಹೀರೋ ಸೇರಿದಂತೆ ವಿವಿಧ ಪ್ರಮುಖ ಕಂಪನಿಗಳ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸೇವಾ ಸೌಲಭ್ಯ ಲಭ್ಯವಿರಲಿದೆ. ಎಲ್ಲ ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ಸರ್ವಿಸ್ ಸೌಲಭ್ಯವೂ ಗ್ರಾಹಕರಿಗೆ ದೊರೆಯಲಿದೆ.ಉತ್ತಮ ಕೊಡುಗೆಗಳೊಂದಿಗೆ ವಿವಿಧ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ವ್ಯಾಪಕ ಶ್ರೇಣಿ, ತರಬೇತಿ ಪಡೆದ ತಂತ್ರಜ್ಞರು ಹಾಗೂ ಆಧುನಿಕ ಸೇವಾ ಉಪಕರಣಗಳನ್ನು ಸಂಸ್ಥೆ ಹೊಂದಿದೆ ಎಂದು ಶ್ವೇತಾ ಮೋಟರ್ಸ್‌ನ ಮಾಲಕ ಹರೀಶ್ ಬಂಗೇರ ತಿಳಿಸಿದ್ದಾರೆ.ಅತಿಥಿಗಳಾಗಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ, ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ,, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮೊಹಮ್ಮದ್ ಅಲಿ, ದಿನೇಶ್ ಮೆದು , ರಾಕೇಶ್ ರೈ ಕೇಡಂಜಿ , ಗಣೇಶ್ ಉದಾನಡ್ಕ, ಲಕ್ಷ್ಮಣ ಕಾರಂದ್ಲಾಜೆ , ಡಾ. ರಾಜಾರಾಮ್, ಕೋಸ್ಟಲ್ ರೈಡರ್, ಯೂಟ್ಯೂಬರ್‌ಗಳು ಹಾಗೂ ರೈಡರ್ ಗರುಡ ಸೇರಿದಂತೆ ಹಲವಾರು ಅತಿಥಿ ಗಳು ಉಪಸ್ಥಿತರಿರುವರು

Leave a Reply

Your email address will not be published. Required fields are marked *

Join WhatsApp Group
error: Content is protected !!