ಮುಕ್ವೆ: ಮಿಲಾದುನ್ನಬಿ ಅಂಗವಾಗಿ ಹಯಾತುಲ್ ಇಸ್ಲಾಂ ಮದ್ರಸ, ನೆರಿಗೇರಿ ಹಾಗೂ ರಹ್ಮಾನಿಯಾ ಜುಮಾ ಮಸೀದಿ ಮುಕ್ವೆ ಇದರ ವತಿಯಿಂದ ಏಕದಿನ ಮತಪ್ರಭಾಷಣ ಹಾಗೂ ಮಕ್ಕಳ ಕಾರ್ಯಕ್ರಮ ಆ.30ರಂದು ಸಂಜೆ 4.30ಕ್ಕೆ ನೆರಿಗೇರಿ ಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸೀದಿ ವಳಚ್ಚಿಲ್, ಮಂಗಳೂರು ಇದರ ಖತೀಬರಾದ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಅವರು ಮತಪ್ರಭಾಷಣ ಮಾಡಲಿದ್ದಾರೆ. ಆರ್‌ಜೆಎಂ ಮುಕ್ವೆ ಖತೀಬರಾದ ಇರ್ಷಾದ್ ಫೈಝಿ ಪಾಲ್ತಾಡ್ ಉದ್ಘಾಟಿಸಲಿದ್ದಾರೆ.ಹಯಾತುಲ್ ಇಸ್ಲಾಂ ಮದ್ರಸ ನೆರಿಗೇರಿ ಸದರ್ ಮುಹಲ್ಲಿಮ್ ಅಬ್ದುಲ್ ರಝಾಕ್ ದಾರಿಮಿ ಸ್ವಾಗತಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!