ಬೆಂಗಳೂರು: ಸಮುದಾಯದ ಅಭಿವೃದ್ಧಿ, ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಗುರಿಯಾಗಿಸಿಕೊಂಡು ಬಂಟರ ಸಂಘ ಬೆಂಗಳೂರು ಚುನಾವಣೆಯಲ್ಲಿ ಡಾ. ದೀಪಕ್ ಶೆಟ್ಟಿ ನೇತೃತ್ವದ ತಂಡ ಸ್ಪರ್ಧಿಸುತ್ತಿದೆ.ಸಂಘಟನೆ ಸಂಘರ್ಷಕ್ಕಾಗಿ ಅಲ್ಲ, ಸಹಬಾಳ್ವೆಗಾಗಿ ಎಂಬ ಧ್ಯೇಯದೊಂದಿಗೆ ತಂಡವು ಚುನಾವಣಾ ಕಣಕ್ಕಿಳಿದಿದೆ. ಬಂಟರ ಸಂಘ ಬೆಂಗಳೂರು ಹಿರಿಯರ ತಪಸ್ಸು, ಕನಸು ಮತ್ತು ಪರಿಶ್ರಮದ ಫಲವಾಗಿದ್ದು, ಪೂರ್ವಸೂರಿಗಳು ಹಚ್ಚಿದ ನಂದಾದೀಪವನ್ನು ಮುಂದಿನ ಪೀಳಿಗೆಗೆ ಬೆಳಗಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಸಂಕಲ್ಪವನ್ನು ತಂಡ ವ್ಯಕ್ತಪಡಿಸಿದೆ.ಆಡಳಿತ ಕೌಶಲ್ಯ, ಅನುಭವ ಹಾಗೂ ಸಂಘದ ಭವಿಷ್ಯದ ಬಗ್ಗೆ ದೂರದೃಷ್ಟಿಯನ್ನು ಹೊಂದಿರುವ ಸಮತೋಲಿತ ತಂಡ ಇದಾಗಿದೆ ಎಂದು ಡಾ. ದೀಪಕ್ ಶೆಟ್ಟಿ ತಂಡ ತಿಳಿಸಿದೆ. ಸಮಾಜದ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು ಕೋರಿದೆ.ಡಾ. ದೀಪಕ್ ಶೆಟ್ಟಿ – ಅಧ್ಯಕ್ಷ ಸ್ಥಾನ – ಕ್ರಮಸಂಖ್ಯೆ 01ಮಧುಕರ ಎಂ. ಶೆಟ್ಟಿ – ಉಪಾಧ್ಯಕ್ಷ ಸ್ಥಾನ – ಕ್ರಮಸಂಖ್ಯೆ 01ಅಮರನಾಥ ಶೆಟ್ಟಿ – ಗೌರವ ಕಾರ್ಯದರ್ಶಿ – ಕ್ರಮಸಂಖ್ಯೆ 01ರಮಿತ್ ಬಿ. ಶೆಟ್ಟಿ – ಖಜಾಂಚಿ – ಕ್ರಮಸಂಖ್ಯೆ 01ಸುರೇಖಾ ಶೆಟ್ಟಿ – ಜೊತೆ ಕಾರ್ಯದರ್ಶಿ – ಕ್ರಮಸಂಖ್ಯೆ 02ಸೌಮ್ಯಪ್ರಿಯ ಹೆಗಡೆ – ಮಹಿಳಾ ಉಪಾಧ್ಯಕ್ಷೆ – ಕ್ರಮಸಂಖ್ಯೆ 02“ಡಾ. ದೀಪಕ್ ಶೆಟ್ಟಿ ಟೀಮ್ – ಇದು ನಿಮ್ಮ ಟೀಮ್” ಎಂಬ ಘೋಷಣೆಯೊಂದಿಗೆ ತಂಡವು ಮತದಾರರ ಬೆಂಬಲ ಕೋರಿದೆ.













