ಸುಳ್ಯ: ಲಾರಿ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸೆ.19ರಂದು ಸಂಜೆ ಸುಳ್ಯ ವಿನೋಭಾನಗರದಲ್ಲಿ ನಡೆದಿದೆ.ಮೃತರನ್ನು ಪುತ್ತೂರು ಕೋಡಿಪಾಡಿ ನಿವಾಸಿ ದೀಪಕ್ ಎನ್. ಎಂದು ಗುರುತಿಸಲಾಗಿದೆ.ಸುಳ್ಯ ಪೊಲೀಸ್ ಠಾಣೆಯ ಮಾಹಿತಿಯಂತೆ, KA-01-AM-2449 ನೋಂದಣಿಯ ಲಾರಿಯನ್ನು ಬಂಟ್ವಾಳ ಕೆದಿಲ ನಿವಾಸಿ ಅಬ್ದುಲ್ ಲತೀಫ್ ಎಂಬವರು ಚಲಾಯಿಸುತ್ತಿದ್ದರು. ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪಾದಚಾರಿಯಾಗಿದ್ದ ದೀಪಕ್ ಅವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 136/2026ರಂತೆ ಬಿಎನ್‌ಎಸ್ ಕಲಂ 281, 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.











