ಪುತ್ತೂರು: ಪುತ್ತೂರು ಸೇರಿದಂತೆ ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಪ್ರಸಿದ್ಧವಾಗಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಮಾಲಕ, ಸರಾಫ್ ಮುಳಿಯ ಶ್ಯಾಮ ಭಟ್ (81) ಅವರು ಅ.4ರಂದು ನಿಧನರಾದರು.ಪುತ್ತೂರಿನ ಪಾಂಗ್ಲಾಯಿಯಲ್ಲಿರುವ ‘ಶ್ಯಾಮಸುಲೋಚನಾ’ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು.ಚಿನ್ನಾಭರಣ, ಬೆಳ್ಳಿ ಹಾಗೂ ವಜ್ರಾಭರಣ ವ್ಯವಹಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ಯಾಮ ಭಟ್ ಅವರು ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉದ್ಯಮ ಕ್ಷೇತ್ರದ ಜತೆಗೆ ಸಾಮಾಜಿಕ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಿಗೂ ಅವರು ಕೊಡುಗೆ ನೀಡುತ್ತಿದ್ದು, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು.ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರು ಪುತ್ರರಾದ ಕೇಶವ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ, ಪುತ್ರಿ ವಿದ್ಯಾಸರಸ್ವತಿ, ಅಳಿಯ ಶ್ಯಾಮಸುಂದರ್, ಸೊಸೆಯಂದಿರಾದ ಕೃಷ್ಣವೇಣಿಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!