ಪುತ್ತೂರು: ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘ ಪುತ್ತೂರು ಇದರ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮುಕ್ರಂಪಾಡಿಯ ಸುಭದ್ರಾ ಸಭಾಭವನದಲ್ಲಿ ನಡೆಯಿತು.ಸಂಘದ ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಸಂದೇಶ್ ನಾಯಕ್ ಕೆಯ್ಯೂರು, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ವಳತ್ತಡ್ಕ ಹಾಗೂ ಕೋಶಾಧಿಕಾರಿಯಾಗಿ ಶಿವಪ್ರಸಾದ್ ಮುಕ್ರಂಪಾಡಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ತೀರ್ಥರಾಮ ಜಿಡೆಕಲ್ಲು, ಪ್ರವೀಣ್ ಕೆಮ್ಮಾಯಿ, ಚಂದ್ರಶೇಖರ ಕಬಕ, ಸತೀಶ್ ಕುಂಬ್ರ ಹಾಗೂ ಗುರುಪ್ರಸಾದ್ ದೊಡ್ಡಡ್ಕ ಆಯ್ಕೆಯಾದರು.ಕಾರ್ಯದರ್ಶಿಗಳಾಗಿ ಸುರೇಶ್ ಬಂಗಾರಡ್ಕ, ಸ್ವಸ್ತಿಕ್ ತಾರಿಗುಡ್ಡೆ, ಯತೀಶ್ ಮಚ್ಚಿಮಲೆ, ಹರೀಶ್ ಕೌಡಿಚ್ಚಾರು ಹಾಗೂ ಚಂದ್ರಶೇಖರ ರಾಗಿದಕುಮೇರು ಅವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಮರುವಾಳ ಹಾಗೂ ಪ್ರಜ್ವಲ್ ಘಾಟೆ, ಸಂಘಟನಾ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಸಹ ಸಂಘಟನಾ ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಅನಿಲ್ ಗೌಡ ತೆಂಕಿಲ ಹಾಗೂ ಮನೀಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!