ಮೊಬೈಲ್‌ಗೆ ಬಂದ ಮೆಸೇಜ್‌ಗೆ ‘OK’ ಕ್ಲಿಕ್ ಮಾಡಿ ₹2.40 ಲಕ್ಷ ಕಳೆದುಕೊಂಡ ವ್ಯಕ್ತಿ!ಪುತ್ತೂರು: ಮೊಬೈಲ್‌ನಲ್ಲಿ ಬಂದ ಸಿಸ್ಟಮ್ ಅಪ್‌ಡೇಟ್ ಮೆಸೇಜ್‌ಗೆ ‘OK’ ಕ್ಲಿಕ್ ಮಾಡಿದ ಬಳಿಕ ಮಾಲ್‌ವೇರ್ ಆ್ಯಪ್ ಡೌನ್‌ಲೋಡ್ ಆಗಿ, ಬ್ಯಾಂಕ್ ಖಾತೆಯಿಂದ ₹2.40 ಲಕ್ಷ ಹಣ ವರ್ಗಾವಣೆಯಾಗಿ ವಂಚನೆಗೊಳಗಾಗಿರುವ ಬಗ್ಗೆ ಪಾಣಾಜೆ ನಿವಾಸಿ ಮಹಮ್ಮದ್ ಕುಂಣಿ ಅವರು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರುದಾರರ ಪ್ರಕಾರ, 2026ರ ಸೆ.29ರಂದು ಅವರ ಮೊಬೈಲ್ ಸ್ಕ್ರೀನ್‌ನಲ್ಲಿ ಸಿಸ್ಟಮ್ ಅಪ್‌ಡೇಟ್‌ಗಾಗಿ ‘OK’ ಕ್ಲಿಕ್ ಮಾಡುವಂತೆ ಮೆಸೇಜ್ ಬಂದಿತ್ತು. ಅದನ್ನು ರದ್ದುಪಡಿಸಲು ಪ್ರಯತ್ನಿಸಿದಾಗ ‘Cancel’ ಆಯ್ಕೆ ಲಭ್ಯವಿಲ್ಲದ ಕಾರಣ ಅನಿವಾರ್ಯವಾಗಿ ‘OK’ ಕ್ಲಿಕ್ ಮಾಡಿದ್ದರು.ಇದಾದ ಬಳಿಕ ಮೊಬೈಲ್‌ನಲ್ಲಿ ಮಾಲ್‌ವೇರ್ ಅಪ್ಲಿಕೇಶನ್ ಡೌನ್‌ಲೋಡ್ ಆಗಿ, ಮೊಬೈಲ್ ಹ್ಯಾಕ್ ಆಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಅ.1ರಂದು ಬೆಟ್ಟಂಪಾಡಿಯ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹50,000 ಡೆಬಿಟ್ ಆಗಿರುವ ಬಗ್ಗೆ ಮೆಸೇಜ್ ಬಂದಿತ್ತು. ಬಳಿಕ ಗೂಗಲ್ ಪೇ ಮೂಲಕ ಖಾತೆಯ ವಹಿವಾಟುಗಳನ್ನು ಪರಿಶೀಲಿಸಿದಾಗ, ಸೆ.29ರಿಂದ ಅ.1ರ ನಡುವಿನ ಅವಧಿಯಲ್ಲಿ ಒಟ್ಟು ₹2,40,000 ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.ತಮ್ಮ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಮ್ಮದ್ ಕುಂಞಿ ಅವರು ಸೈಬರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!