ಮಂಗಳೂರು: ಕೇರಳದ ಉಪ್ಪಳದಿಂದ ಕಾನೂನುಬದ್ಧ ಬಿಲ್‌ನೊಂದಿಗೆ ಎಮ್ಮೆ ಮತ್ತು ಎತ್ತಿನ ಮಾಂಸ ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಕಾರುಗಳಲ್ಲಿ ಬೆನ್ನಟ್ಟಿ, ಬ್ಯಾರಿಕೇಡ್ ಅಡ್ಡಹಾಕಿ ತಡೆಯಲು ಯತ್ನಿಸಿ ಜೀವಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೋಕಟ್ಟೆ ನಿವಾಸಿ, ಪಿಕಪ್ ಚಾಲಕ ಮೊಹಮ್ಮದ್ ಅಫ್ರೀದ್ ಅವರು ದೂರು ನೀಡಿದವರಾಗಿದ್ದಾರೆ.ಅಕ್ಟೋಬರ್ 25ರಂದು ಬೆಳಗಿನ ಜಾವ ಉಪ್ಪಳದ ಬಂದಿಯೋಡ್‌ನಿಂದ ಸುಮಾರು 327 ಕೆ.ಜಿ. ಮಾಂಸವನ್ನು ಬಿಲ್ ಸಹಿತ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಮಂಗಳೂರಿಗೆ ವಾಪಸಾಗುತ್ತಿದ್ದ ವೇಳೆ, ತಲಪಾಡಿ ಟೋಲ್ ಗೇಟ್ ಸಮೀಪ ಬಿಳಿ ಬಣ್ಣದ ಸೆಲೆರಿಯೊ ಮತ್ತು ಕ್ರೇಟಾ ಕಾರುಗಳಲ್ಲಿ ಬಂದ 5–6 ಮಂದಿ ಅಪರಿಚಿತರು ವಾಹನವನ್ನು ಬೆನ್ನಟ್ಟಿದ್ದಾರೆ ಎನ್ನಲಾಗಿದೆ.

ರಾಡ್ ಹಿಡಿದು ಬ್ಯಾರಿಕೇಡ್ ಅಡ್ಡಹಾಕಿ ವಾಹನವನ್ನು ತಡೆಯಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ವೇಳೆ ಚಾಲಕ ಸಮಯಪ್ರಜ್ಞೆ ಮೆರೆದು ವಾಹನವನ್ನು ತಪ್ಪಿಸಿಕೊಂಡು ಕಾವೂರು ಮತ್ತು ಮರವೂರು ಮಾರ್ಗವಾಗಿ ಜೋಕಟ್ಟೆಯಲ್ಲಿರುವ ಅಂಗಡಿಗೆ ತಲುಪಿದ್ದಾರೆ. ಇದರಿಂದ ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ.ಘಟನೆಯಿಂದ ಆತಂಕಗೊಂಡ ಚಾಲಕ ಬಳಿಕ ಕಾವೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!