ಪುತ್ತೂರು: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ (ಯುಜಿಸಿ) ಮಾನ್ಯತೆ ಪಡೆದ ನೋಡಲ್ ಏಜೆನ್ಸಿ ಅಕ್ಟೋಬರ್‌ನಲ್ಲಿ ನಡೆಸಿದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 14 ಮಂದಿ ಉತ್ತೀರ್ಣರಾಗಿದ್ದಾರೆ.
ಇವರಲ್ಲಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಏಳು ಮಂದಿ ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿಗಳೂ ಸೇರಿದ್ದಾರೆ.
ಭೌತಶಾಸ್ತ್ರ ವಿಭಾಗದ ಆಯಿಷತ್ ಶಮಾ ಎ. ಮತ್ತು ಸಿಂಚನ ಬಿ., ಗಣಿತಶಾಸ್ತ್ರ ವಿಭಾಗದ ಶ್ರದ್ಧಾ ಎ.ಎಸ್., ಪೃಥ್ವಿಕಾ, ಅದಿತಿ, ಶ್ರೀದೇವಿ ಎನ್. ಮತ್ತು ಗಣೇಶ್ ಟಿ.ಡಬ್ಲ್ಯೂ., ಎಂಸಿಎ ವಿಭಾಗದ ರಂಜನ್ ಎಸ್. ಮತ್ತು ರತನ್ ಎನ್. ಮೊದಲ ಪ್ರಯತ್ನದಲ್ಲೇ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದರೊಂದಿಗೆ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಗೊಳ್ಳಲು ಅಗತ್ಯವಿರುವ ಅರ್ಹತೆಯನ್ನು ಅವರು ಪಡೆದುಕೊಂಡಿದ್ದಾರೆ.
ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಂತೋಷ್ ಶೆಟ್ಟಿ (ರಾಜಕೀಯ ಶಾಸ್ತ್ರ), ಶ್ರದ್ಧಾ ಎ.ಎಸ್. (ಕಂಪ್ಯೂಟರ್ ಸೈನ್ಸ್), ಪೃಥ್ವಿಕಾ (ವಾಣಿಜ್ಯಶಾಸ್ತ್ರ), ಸುಜಿತ್ ಎಸ್. ಮತ್ತು ಕೃತಿ ಎ. (ಭೌತಶಾಸ್ತ್ರ), ಅಂಜು ಜೇಮ್ಸ್ (ಗಣಿತಶಾಸ್ತ್ರ) ಅವರು ಕೂಡ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಷಯದ ಕುರಿತು ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದಿಂದ ಹಾಗೂ ವಿಷಯವಾರು ಪತ್ರಿಕೆಗಳಿಗೆ ಆಯಾ ವಿಭಾಗಗಳಿಂದ ತರಬೇತಿ ನೀಡಲಾಗಿತ್ತು.
ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ಕಾಲೇಜಿನ ಸಂಚಾಲಕ ರೆ. ಡಾ. ಜೆ.ಬಿ. ಸಲಾನ್, ಪ್ರಾಂಶುಪಾಲ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ವಿನಯಚಂದ್ರ, ಡಾ. ವಿಪಿನ್ ನಾಯ್ ಪ್ರತೀಕ್ಷಾ ಅಭಿನಂದಿಸಿದ್ದಾರೆ.









