
ಗಳೂರು: ಅವರಿಬ್ಬರು ಪರಸ್ಪರ ತುಂಬಾನೇ ಪ್ರೀತಿ (Love Relationship) ಮಾಡುತ್ತಿದ್ದರು. ಆತ ಆಕೆಯನ್ನೇ ತನ್ನ ಪ್ರಪಂಚ ಅಂದುಕೊಂಡಿದ್ದ, ಆದರೆ ದಿನ ಕಳೆದಂತೆ ಅವಳಿಗೆ ಲವ್ ಅನ್ನೋದು ತುಂಬಾ ಬೋರ್ ಅನ್ಸಿತ್ತು. ಹೀಗಾಗಿ ಬ್ರೇಕಪ್ (Breakup) ಮಾಡ್ಕೊಳ್ಳೋದಕ್ಕೆ ಮುಂದಾಗಿದ್ದಾಕೆಗೆ ಫೋಟೋಸ್, ವಿಡಿಯೋಗಳೇ (Photos and Videos) ಅಡ್ಡಿ ಆಗಿದ್ವು.
ಪ್ರಿಯಕರನ ಮೊಬೈಲ್‌ನಲ್ಲಿದ್ದ (Mobile) ವಿಡಿಯೋ ಡಿಲೀಟ್ ಮಾಡಿಸೋದಕ್ಕೆ ಐನಾತಿ ಐಡಿಯಾ (Idea) ಕೇಳಿದರೆ ನೀವು ಬೆಚ್ಚಿಬೀಳ್ತಿರ.
ಪ್ರಿಯಕರನ ಮೊಬೈಲ್‌ನಲ್ಲಿ ಏಕಾಂತದ ವಿಡಿಯೋ!
ಈ ಸ್ಟೋರಿ ಹಿರೋಯಿನ್ ಆಯಂಡ್ ಲೇಡಿ ವಿಲನ್ ಹೆಸರು ಶೃತಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ನೋಡೋದಕ್ ಚೆನ್ನಾಗಿರೋ ಈಕೆ ಕಣ್ಣಲ್ಲೇ ಪ್ರೇಮದ ಬಾಣ ಬಿಟ್ಟು ವಂಶಿಕೃಷ್ಣ ಎಂಬಾತನನ್ನ ತನ್ನ ಬಲೆಗೆ ಬೀಳಿಸಿಕೊಂಡಿದ್ದಳಂತೆ. ಈಕೆ ಬಣ್ಣ ಬಣ್ಣದ ಮಾತಿಗೆ ಮರುಳಾಗಿದ್ದ ವಂಶಿಕೃಷ್ಣ, ಶೃತಿ ಇಲ್ಲದೇ ನನ್ ಉಸಿರೇ ಇಲ್ಲ ಅಂತ ಪ್ರೀತಿ ಮಾಡ್ತಿದ್ದನಂತೆ.
ಒಳ್ಳೇ ಕುಳ ಇರಿವ ಹುಡುಗಿ ಸಿಕ್ಕ ಅಂತ ಇದ್ದಷ್ಟು ದಿನ ಲೈಫು ಜಾಲಿ ಜಾಲಿ ಅಂತ ಎಂಜಾಯ್ ಮಾಡಿದ್ದಾರೆ. ಆದರೆ ಪ್ರೀತಿಯ ಆಟ ಆಡಿಸಿದವಳಿಗೆ ಅದಾಗಲೇ ಪ್ರಿಯಕರ ಬೇಸವಾಗಿದ್ದನಂತೆ. ಡೇ ಆಂಡ್ ನೈಟ್ ಲವ್ ಮೀ, ಲವ್ ಮೀ ಅಂತಿದ್ದವಳು ಕೈ ಕೊಡೋದಕ್ಕೆ ಪ್ಲಾನ್ ಮಾಡಿದ್ದಳಂತೆ. ಆದರೆ ಪ್ರಿಯಕರ ಜೊತೆ ಕಾಲ ಕಳೆದ ಫೋಟೋಸ್, ವಿಡಿಯೋಸ್ ಈಕೆಗೆ ಭಯ ಹುಟ್ಟಿಸಿತ್ತಂತೆ. ಹೀಗಾಗಿ ಬರೋಬ್ಬರಿ ಒಂದೂವರೆ ಲಕ್ಷ ಕೊಟ್ಟು ವಂಶಿಕೃಷ್ಣನ ಮೊಬೈಲ್ ರಾಬರಿ ಮಾಡಿಸೋದಕ್ಕೆ, ಇದೇ ಸುರೇಶ್, ಮನೋಜ್, ವೆಂಕಟೇಶ್, ಹೊನ್ನಪ್ಪನಿಗೆ ಸೂಪಾರಿ ಕೊಟ್ಟಿದ್ದಳಂತೆ.
ಪಕ್ಕಾ ಪ್ಲಾನ್ ಮಾಡಿದ್ದ ಶೃತಿ ಸೆಪ್ಟೆಂಬರ್ 20ರಂದು ವಂಶಿಕೃಷ್ಣರೆಡ್ಡಿಯನ್ನ ಭೇಟಿಯಾಗಿದ್ದಳಂತೆ. ಬೋಗನಹಳ್ಳಿಯ ಪಾರ್ಕ್‌ವೊಂದರಲ್ಲಿ ಮಾತ್ನಾಡಿ ವಾಪಸ್ ಬೈಕ್‌ನಲ್ಲಿ ಹೋಗ್ತಿದ್ದರು. ಆಗ ಎಂಟ್ರಿ ಕೊಟ್ಟ ಈ ಕಿರಾಕತರು ಕಾರ್‌ನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಜಗಳ ತೆಗೆದು ವಂಶಿಕೃಷ್ಣನ ಮೊಬೈಲ್ ಕಸಿದುಕೊಂಡಿದ್ದಾರೆ. ಜೊತೆಗೆ ಶೃತಿಯ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದರಂತೆ. ತಕ್ಷಣ ಕಂಪ್ಲೆಂಟ್ ಕೊಡೋಣ ಅಂದಾಗ, ಹೋದರೆ ಹೋಗ್ಲಿ ಬಿಡು ಅಂತ ಒತ್ತಾಯ ಮಾಡಿದ್ದಳಂತೆ. ಆಕೆ ಮಾತು ಕೇಳದೆ ವಂಶಿಕೃಷ್ಣ ಕಾರ್ ನಂಬರ್ ಸಮೇತ ದೂರು ಕೊಟ್ಟಿದ್ದ.ತನಿಖೆಗೆ ಇಳಿದ ಬೆಳ್ಳಂದೂರು ಪೊಲೀಸರು ಆರೋಪಿಗಳಿಗೆ ಲಾಠಿ ರೂಚಿ ತೋರಿಸಿದ್ದಾರೆ. ಆಗಲೇ ನೋಡಿ ಈಕೆಯ ರಾಬರಿ ಕಹಾನಿ ಹೊರಬಿದ್ದಿದ್ದು. ಸದ್ಯ ರಾಬರಿ ವೈಯಾರಿಯನ್ನ ಬೆಳ್ಳಂದೂರು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ಅದೆನೇ ಇರಲಿ ಪ್ರೀತಿ ಅಂದರೆ ಬೊಂಬೆಯಾಟ ಅಂದುಕೊಂಡವಳು, ಕಂಬಿ ಹಿಂದೆ ಬಾಯಿ ಬಾಯಿ ಬಡ್ಕೊಳ್ಳುವಂತಾಗಿದೆ.
